ಮಂಡ್ಯ: ಜಿಲ್ಲೆಯಲ್ಲಿ ನಿನ್ನೆ 492 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 23,167ಕ್ಕೆ ಏರಿಕೆಯಾಗಿದೆ.
ಮಂಡ್ಯ ತಾಲೂಕಿನಲ್ಲಿ 235, ಮದ್ದೂರು 68, ಮಳವಳ್ಳಿ 40, ಪಾಂಡವಪುರ 23, ಶ್ರೀರಂಗಪಟ್ಟಣ 42, ಕೆ.ಆರ್.ಪೇಟೆ 19, ನಾಗಮಂಗಲ 62 ಹಾಗೂ ಹೊರ ಜಿಲ್ಲೆಯ 3 ಜನರಿಗೆ ಸೋಂಕು ತಗುಲಿದೆ.
ಸೋಂಕಿನಿಂದ 62 ಮಂದಿ ಗುಣಮುಖರಾಗಿದ್ದು, ಈವರೆಗೆ 20,826 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 2,171 ಸಕ್ರಿಯ ಪ್ರಕರಣಗಳಿವೆ. ನಿನ್ನೆ ಇಬ್ಬರು ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.