ಮಂಡ್ಯ: ಜಿಲ್ಲಾಧಿಕಾರಿ ಅಶ್ವಥಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಎರಡು ತಿಂಗಳ ಹಿಂದಷ್ಟೇ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ಅಶ್ವಥಿ, ಜಿಲ್ಲೆಯ ಅಭಿವೃದ್ಧಿಯ ಜೊತೆಗೆ ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿದ್ದಾರೆ.
ಡಿಸಿ ಕಾರು ಚಾಲಕನಿಗೆ ಗುರುವಾರ ಪಾಸಿಟಿವ್ ಬಂದಿತ್ತು. ಹಿಗಾಗಿ ಅನುಮಾನದ ಮೇರೆಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಇದೀಗ ವರದಿಯಲ್ಲಿ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಇವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಮಿಮ್ಸ್ ವೈದ್ಯರ ಸಲಹೆಯಂತೆ ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಓದಿ : ವಿಶೇಷ ಲೇಖನ: ಕೋವಿಡ್ ಲಸಿಕೆಗಾಗಿ ಅತಿ ಕಡಿಮೆ ಬಜೆಟ್ ಹಣ ಮೀಸಲು