ಮಂಡ್ಯ: ಜನರಿಗೆ ಕೊರೊನಾ ಸೋಂಕು ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಂಡ್ಯ ಜಿಲ್ಲಾಡಳಿತ ಜಾಗೃತಿ ವಿಡಿಯೋ ಹಾಡು ಹೊರತಂದಿದೆ. ಈ ಮೂಲಕ ಮಾರಕ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ಕೊರೊನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸುತ್ತಿದೆ.
- " class="align-text-top noRightClick twitterSection" data="">
ಇಡೀ ವಿಶ್ವದಲ್ಲೇ ತಲ್ಲಣ ಉಂಟು ಮಾಡಿರುವ ಕೊರೊನಾ ಮಹಾಮಾರಿ ಸಕ್ಕರೆನಾಡು ಮಂಡ್ಯ ಜಿಲ್ಲೆಯೂ ಕೂಡಾ ನಲುಗುವಂತೆ ಮಾಡಿದೆ. ಮಾರಕ ರೋಗ ಓಡಿಸಲು ಜನರು ಸಹಕಾರ ನೀಡಿದರೆ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶವನ್ನು ತಪ್ಪದೇ ಪಾಲಿಸಬೇಕು ಎಂದು ಈ ಗೀತೆಯಲ್ಲಿ ಜನರಿಗೆ ಮನವಿ ಮಾಡಲಾಗಿದೆ.
ಇದೇ ವೇಳೆ, ಕೊರೊನಾ ವಾರಿಯರ್ಸ್ ಸೇವೆಯನ್ನು ನೆನೆಯುವ ಕೆಲಸವನ್ನು ಈ ಗೀತೆಯಲ್ಲಿ ಮಾಡುವುದರ ಜೊತೆಗೆ ಕೊರೊನಾ ಸಂಕಷ್ಟದಲ್ಲಿ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ಮಾಡಿರುವ ಜವಾಬ್ದಾರಿಯುತ ಮತ್ತು ಸಹಕಾರವನ್ನು ಶ್ಲಾಘಿಸಲಾಗಿದೆ.
ಮಂಡ್ಯ ಜಿಲ್ಲೆಯ ಕೊರೊನಾ ಜಾಗೃತಿ ಗೀತೆಗೆ ಹೊಂಬಾಳೆ ಗ್ರೂಫ್ ಸಾಥ್ ನೀಡಿದೆ. ಗೀತೆಯ ಸಾಹಿತ್ಯವನ್ನು ಮಂಡ್ಯ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಜಿ.ಎಸ್.ಸೋಮಶೇಖರ್ ಬರೆದಿದ್ದಾರೆ. ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ರಘು ದೀಕ್ಷಿತ್, ನವೀನ್ ಸಜ್ಜು, ಎಂ.ಡಿ.ಪಲ್ಲವಿ, ಅನನ್ಯ ಭಟ್ ಹಾಗೂ ಸುನೀತಾ ಸೊಗಸಾಗಿ ಹಾಡಿದ್ದಾರೆ.