ಮಂಡ್ಯ: ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗೂಡಿ ರಾಜ್ಯದಲ್ಲಿ ದೋಸ್ತಿ ಸರ್ಕಾರ ರಚಿಸಿ ಆಡಳಿತ ನಡೆಸುತ್ತಿವೆ. ಆದರೆ ಮಂಡ್ಯದಲ್ಲಿ ರಾಜಕೀಯ ವೈರಿಗಳು. ಇದು ಮತ್ತೊಮ್ಮೆ ಸಾಬೀತಾಗಿದೆ.
ಹೌದು, ಕೆ.ಆರ್. ಪೇಟೆಯಲ್ಲಿ ಪುರಸಭೆ ಅಧಿಕಾರಕ್ಕಾಗಿ ಕೈ- ಜೆಡಿಎಸ್ ನಾಯಕರ ಸಮರ ಶುರುವಾಗಿದ್ದು, ಅಧಿಕಾರಕ್ಕಾಗಿ ಜೆಡಿಎಸ್ ಸದಸ್ಯರಿಗೆ ಕೈ ಪಕ್ಷದವರು ಧಮಕಿ ಹಾಕಿದ್ದಾರೆ ಎಂದು ಪ್ರಕರಣ ದಾಖಲು ಮಾಡಲಾಗಿದೆ. ಕೆ.ಆರ್.ಪೇಟೆಯ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಪುತ್ರ ಹಾಗೂ ಸಹೋದರ ವಿರುದ್ಧ ದೂರು ದಾಖಲಾಗಿದೆ.
ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಪುತ್ರ, ಪುರಸಭಾ ಸದಸ್ಯ ಶ್ರೀಕಾಂತ್ ಮತ್ತು ಸಹೋದರ ಕೆ.ಬಿ. ಮಹೇಶ್ ವಿರುದ್ಧ ದೂರು ದಾಖಲಾಗಿದ್ದು, ಜೆಡಿಎಸ್ ಸದಸ್ಯ ಸಂತೋಷ್ ಪೊಲೀಸರಿಗೆ ದೂರು ನೀಡಿದ್ದಾರೆ. ಪುರಸಭೆಯ ಅಧಿಕಾರಕ್ಕಾಗಿ ಜೆಡಿಎಸ್ನ ಕೆಲ ಸದಸ್ಯರಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಧಮಕಿ ಹಾಕುತ್ತಿದ್ದಾರೆ ಎಂದು ದೂರು ನೀಡಲಾಗಿದೆ. ಇನ್ನು ಜೆಡಿಎಸ್ ಸದಸ್ಯರ ತಂಟೆಗೆ ಬಂದ್ರೆ ಸುಟ್ಟು ಹೋಗ್ತಾರೆ ಎಂದು ಶಾಸಕ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.ದೂರಿನ ಮೇರೆಗೆ ಕೆ.ಆರ್. ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.