ETV Bharat / state

ಪಕ್ಷದ ಶಿಸ್ತಿಗೆ ವಿರುದ್ಧ ನಡೆದರೆ ಕಠಿಣ ಕ್ರಮ - ಪರಮೇಶ್ವರ್‌ ಚಾಟಿ

ಮಂಡ್ಯ ಜಿಲ್ಲೆಯ ಕೈ ಬಂಡಾಯಗಾರರಿಗೆ ಕಾಂಗ್ರೆಸ್ ಬಾಗಿಲು ಮುಚ್ಚಲಿದೆಯೇ? ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಕ್ಷೇತ್ರದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಡಾ. ಜಿ.ಪರಮೇಶ್ವರ್
author img

By

Published : Apr 14, 2019, 5:47 PM IST

ಮಂಡ್ಯ: ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಾದ ನರೇಂದ್ರ ಸ್ವಾಮಿ ಹಾಗು ಚೆಲುವರಾಯಸ್ವಾಮಿ ವಿರುದ್ಧ ಉಚ್ಛಾಟನೆಗೆ ಕಾರ್ಯಕರ್ತರ ಒತ್ತಡ ಹೆಚ್ಚುತ್ತಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಇಂದು ಎಸ್‌ಸಿ/ಎಸ್‌ಟಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಾ. ಜಿ.ಪರಮೇಶ್ವರ್, ಹೈಕಮಾಂಡ್ ಆದೇಶದಂತೆ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನ ಬೆಂಬಲಿಸಬೇಕು. ಇಲ್ಲವಾದಲ್ಲಿ ಪಕ್ಷ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಬಂಡಾಯ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಡಾ. ಜಿ.ಪರಮೇಶ್ವರ್

ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಾರ್ಯಕರ್ತರು ಬೆಂಬಲಿಸಬೇಕು. ಒಂದು ವೇಳೆ ಮುಖಂಡರು ಪಕ್ಷದ ನಡೆಯ ವಿರುದ್ಧ ನಡೆದರೆ, ಯಾರೇ ಆದರೂ ಪಕ್ಷ ಅವರನ್ನ ಕ್ಷಮಿಸೋದಿಲ್ಲ ಎಂದು ಕಡಕ್‌ ಆಗಿ ವಾರ್ನ್ ಮಾಡಿದರು.

ಇದೇ ವೇಳೆ ಸಭೆಯಲ್ಲಿ ಮಾಜಿ ಸಚಿವರಾದ ನರೇಂದ್ರ ಸ್ವಾಮಿ ಹಾಗು ಚಲುವರಾಯಸ್ವಾಮಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಆಗ್ರಹ ಕೇಳಿಬಂತು.

Intro:ಮಂಡ್ಯ: ಜಿಲ್ಲೆಯ ಕೈ ಬಂಡಾಯಗಾರರಿಗೆ ಕಾಂಗ್ರೆಸ್ ಬಾಗಿಲು ಮುಚ್ಚಲಿದ್ಯಾ. ಅವರ ಮುಂದಿನ ರಾಜಕೀಯ ನಡೆ ಎಲ್ಲಿಂದ ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಎದ್ದಿದೆ. ಮೈತ್ರಿ ಧರ್ಮ ಪಾಲಿಸದ ನಾಯಕರ ಉಚ್ಚಾಟನೆಗೆ ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಲಾಗಿದೆ.
ಹೌದು, ಇಂದು ನಗರದಲ್ಲಿ ಜಿಲ್ಲಾ ಎಸ್‌ಸಿ/ಎಸ್‌ಟಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ಡಿಸಿಎಂ ಡಾ. ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಅವರ ಆದೇಶದಂತೆ ಮೈತ್ರಿ ಅಭ್ಯರ್ಥಿಗಳನ್ನ ಬೆಂಬಲಿಸಬೇಕು.
ಇದು ಪಕ್ಷದ ತೀರ್ಮಾನ. ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದರೆ ಶಿಸ್ತು ಕ್ರಮ. ಯಾರೇ ಆದರೂ ಪಕ್ಷ ಅವರನ್ನ ಕ್ಷಮಿಸೋದಿಲ್ಲ. ಪಕ್ಷದಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವರಾದ ನರೇಂದ್ರ ಸ್ವಾಮಿ, ಚಲುವರಾಯಸ್ವಾಮಿ ಉಚ್ಚಾಟನೆಗೆ ಸಭೆಯಲ್ಲಿ ಆಗ್ರಹ ಕೇಳಿ ಬಂತು. ಆಗ ಉತ್ತರಿಸಿದ ಪರಮೇಶ್ವರ್ ಎಐಸಿಸಿಯ ತೀರ್ಮಾನವನ್ನು ಹೇಳಿದರು.
ಹಾಗಾದರೆ ಎಐಸಿಸಿ ಶಿಸ್ತು ಕ್ರಮ ಕೈಗೊಂಡರೆ ಈ ಇಬ್ಬರು ನಾಯಕರ ರಾಜಕೀಯ ಜೀವನ ಎಲ್ಲಿಂದ ಅನ್ನೋ ಪ್ರಶ್ನೆ ಎದುರಾಗಿದೆ. ಇದಕ್ಕೆ ಎಐಸಿಸಿ ತೀರ್ಮಾನದ ಮೇಲೆ ರಾಜಕೀಯ ಭವಿಷ್ಯ ನಿಂತಿದೆ ಎನ್ನಲಾಗಿದೆ.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.