ETV Bharat / state

ತೂಬಿನಕೆರೆ ಹೆಲಿಪ್ಯಾಡ್​ಗೆ ಬಂದಿಳಿದ ಬಿಎಸ್​ವೈ.. ಬೂಕನಕೆರೆಗೆ ತೆರಳಿದ ನೂತನ ಸಿಎಂ

ತೂಬಿನಕೆರೆ ಹೆಲಿಪ್ಯಾಡ್​ಗೆ ಬಂದಿಳಿದ ಬಿಎಸ್​ವೈ, ಪಾಂಡವಪುರ ಮಾರ್ಗವಾಗಿ ಬೂಕನಕೆರೆಗೆ ತೆರಳಿದರು.

ಬೂಕನಕೆರೆಗೆ ತೆರಳಿದ ನೂತನ ಸಿಎಂ
author img

By

Published : Jul 27, 2019, 1:34 PM IST

ಮಂಡ್ಯ: ನೂತನ ಸಿಎಂ ಆಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್.​ಯಡಿಯೂರಪ್ಪ ಬೂಕನಕೆರೆಗೆ ತೆರಳಲು ತೂಬಿನಕೆರೆ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ. ಪುತ್ರ ರಾಘವೇಂದ್ರ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಬಿಎಸ್​ವೈಗೆ ಸಾಥ್​ ನೀಡಿದರು.

ನೂತನ ಸಿಎಂ ಯಡಿಯೂರಪ್ಪಗೆ ಜಿಲ್ಲಾಧಿಕಾರಿ ಮಂಜುಶ್ರೀ, ಎಸ್‌ಪಿ ಶಿವಪ್ರಕಾಶ್ ದೇವರಾಜು ಸ್ವಾಗತ ಕೋರಿದರು‌. ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕಾರ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಮನೆ ದೇವರ ದರ್ಶನಕ್ಕೆ ಬಂದಿದ್ದೇನೆ. ಬೂಕನಕೆರೆಯಲ್ಲಿರುವ ನಮ್ಮ ಮನೆಗೆ ಹೋಗಿ ಅಲ್ಲಿಂದ ಸಿದ್ಧಲಿಂಗೇಶ್ವರನ ದರ್ಶನ ಪಡೆದು ಮೇಲುಕೋಟೆಗೆ ತೆರಳುತ್ತೇನೆ ಎಂದು ತಿಳಿಸಿದರು.

ಬೂಕನಕೆರೆಗೆ ತೆರಳಿದ ನೂತನ ಸಿಎಂ

ಮಾರ್ಗ ಬದಲಿಸಿದರಾ ಬಿಎಸ್​ವೈ?

ಸಿಎಂ ಯಡಿಯೂರಪ್ಪ ಬೂಕನಕೆರೆಗೆ ತೆರಳಲು ಪೊಲೀಸ್ ಅಧಿಕಾರಿಗಳು ಬೆಂಗಳೂರು - ಮೈಸೂರು ಹೆದ್ದಾರಿ ಮಾರ್ಗವಾಗಿ, ಕಿರಂಗೂರು ಸಮೀಪ ಬೀದರ್ ಹೆದ್ದಾರಿ ಮೂಲಕ ಮಾಜಿ ಸಚಿವ ಪುಟ್ಟರಾಜು ಗ್ರಾಮದ ಚಿನಕುರಳಿಯಿಂದ ಬೂಕನಕೆರೆಗೆ ತೆರಳಲು ಮಾರ್ಗ ನಿಗದಿಪಡಿಸಿದ್ದರು. ಆದರೆ, ಸಿಎಂ ಯಡಿಯೂರಪ್ಪ ಆ ಮಾರ್ಗ ಬೇಡ, ದೂರವಾಗುತ್ತದೆ ಎಂದು ಪಾಂಡವಪುರ ಮಾರ್ಗವಾಗಿ ಬೂಕನಕೆರೆಗೆ ತೆರಳಿದರು.

ಊರಿನ ಮಗನನ್ನು ಕಣ್ತುಂಬಿಕೊಳ್ಳಲಿ ಕಾತುರ :

ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಕುವರ ಹಾಗೂ ನೂತನ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರನ್ನು ಕಣ್ತುಂಬಿಕೊಂಡು ಶುಭಹಾರೈಸಲು ಅಪಾರ ಜನಸ್ತೋಮವೇ ನೆರೆದಿದೆ. 4ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ಅಂದಿನಿಂದಲೂ ತಮ್ಮ ಹುಟ್ಟೂರಿಗೆ ತೆರಳಿ ಪೂಜೆ ಸಲ್ಲಿಸುವುದನ್ನು ರೂಢಿಸಿಕೊಂಡಿದ್ದಾರೆ.

Intro:ಬೂಕನಕೆರೆ

Body:ಬೂಕನಕೆರೆ

Conclusion:ನೂತನ ಮುಖ್ಯಮಂತ್ರಿ ಹಾಗೂ ಹುಟ್ಟೂರಿನ ಮಗನನ್ನು ಕಣ್ತುಂಬಿಕೊಳ್ಳಲಿ ಕಾತುರ
ಮಂಡ್ಯ:ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಕುವರ ಹಾಗೂ ನೂತನ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರನ್ನು ಕಣ್ತುಂಬಿಕೊಂಡು ಶುಭಕಾಮನೆಗಳ ಹರಿಸಲು ಅಪಾರ ಜನಸ್ತೋಮವೇ ನೆರೆದಿದೆ.
ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ಅಂದಿನಿಂದಲ್ಲೂ ತಮ್ಮ ಹುಟ್ಟೂರಿಗೆ ತೆರಳಿ ಪೂಜೆ ಸಲ್ಲಿಸುವುದು ರೂಢಿಸಿಕೊಂಡಿದ್ದಾರೆ.
ಅಲ್ಲದೇ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕೂಡ ನೋಡಲು ಬೂಕನಕೆರೆ ವೃತ್ತದ ಸುತ್ತ ಜಮಾಯಿಸಿದ್ದಾರೆ.ಎಲ್ಲೆಡೆ ಬೀಗಿ ಪೊಲೀಸ್ ಬಂದ್ ವ್ಯವಸ್ಥೆ ಮಾಡಲಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.