ETV Bharat / state

ಗೌರಿ ಹಬ್ಬದ ದಿನ ಕಾವೇರಮ್ಮನಿಗೆ ಸಿಎಂ ಬಾಗಿನ ಅರ್ಪಣೆ - Minister Narayana

ಗೌರಿ ಹಬ್ಬದ ದಿನದಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಕಾವೇರಿ ಮಾತೆಗೆ ತವರಿನ ಬಾಗಿನ ಅರ್ಪಣೆ ಮಾಡಲಿದ್ದಾರೆ ಎಂದು ಸಚಿವ ನಾರಾಯಣ ಗೌಡ ತಿಳಿಸಿದರು.

Mandya
ಗೌರಿ ಹಬ್ಬದ ದಿನ ಕಾವೇರಮ್ಮನಿಗೆ ಬಾಗೀನ ಅರ್ಪಣೆ
author img

By

Published : Aug 15, 2020, 2:36 PM IST

ಮಂಡ್ಯ: ಗೌರಿ ಹಬ್ಬದ ದಿನದಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಕಾವೇರಿ ಮಾತೆಗೆ ತವರಿನ ಬಾಗಿನ ಅರ್ಪಣೆ ಮಾಡಲಿದ್ದಾರೆ. ಅಂದು ಸಂಪ್ರದಾಯದಂತೆ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವ ನಾರಾಯಣ ಗೌಡ ತಿಳಿಸಿದರು.

ಗೌರಿ ಹಬ್ಬದ ದಿನ ಕಾವೇರಮ್ಮನಿಗೆ ಸಿಎಂ ಬಾಗೀನ ಅರ್ಪಿಸಲಿದ್ದಾರೆ: ಸಚಿವ ನಾರಾಯಣ ಗೌಡ

ಕೆಆರ್‌ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಗೌರಿ ಹಬ್ಬದಂದು ಕಾವೇರಿ ಮಾತೆಗೆ ಸಿಎಂ ಬಾಗಿನ ಅರ್ಪಿಸಲಿದ್ದಾರೆ. ಮೊದಲು ಕಾವೇರಿಗೆ ಬಾಗಿನ ಅರ್ಪಿಸಿ ಬಳಿಕ ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಲಿದ್ದಾರೆ ಎಂದರು. ಈ ಬಾರಿ ಆಡಂಬರದ ಕಾರ್ಯಕ್ರಮ ಇರುವುದಿಲ್ಲ.

ಕಾವೇರಿ ಮಾತೆ ಶಕ್ತಿ ತುಂಬಿದ್ದು, ಬಾಗಿನ ನೀಡುವುದು ನಮ್ಮ ಧರ್ಮ. ರೈತರಿಗೆ, ಬೆಂಗಳೂರು ಸೇರಿದಂತೆ ಜನರ ಕುಡಿಯುವ ನೀರಿಗೆ ತೊಂದರೆಯಾಗದಿರಲಿ ಎಂದು ಪೂಜೆ ಸಲ್ಲಿಸಲಾಗುವುದು. ಕಳೆದ ಬಾರಿಯೂ ಸಿಎಂ ಯಡಿಯೂರಪ್ಪ ಬಾಗಿನ ಬಾಗಿನ ಅರ್ಪಿಸಿದ್ದರು. ಬೇಸಿಗೆಯಲ್ಲೂ ನೀರಿಗೆ ನಮಗೆ ತೊಂದರೆಯಾಗಿರಲಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.