ETV Bharat / state

ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಸಿಎಂ ಕುಮಾರಸ್ವಾಮಿಯವರ ಅಭಿಮಾನಿ ರೈತ! - undefined

ಸಿಎಂ ಕುಮಾರಸ್ವಾಮಿಯ ಅವರ ಅಪ್ಪಟ ಅಭಿಮಾನಿಯಾಗಿದ್ದ ರೈತನೋರ್ವ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಕ್ಕರೆ ನಾಡಲ್ಲಿ ಈ ಕಹಿ ಘಟನೆ ನಡೆದಿದೆ.

ರೈತ ಆತ್ಮಹತ್ಯೆ
author img

By

Published : Jun 17, 2019, 5:28 PM IST

Updated : Jun 17, 2019, 10:20 PM IST

ಮಂಡ್ಯ: ಸಾಲಬಾಧೆ ತಾಳಲಾರದೆ ಸೆಲ್ಫಿ ವಿಡಿಯೋ ಮಾಡಿದ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಆಘಲಯ ಗ್ರಾಮದಲ್ಲಿ ನಡೆದಿದೆ.

ಸಿ.ಎಂ. ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿಯಾಗಿದ್ದ ರೈತ ಸುರೇಶ್(46) ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೂ‌ ಮುನ್ನ ಸೆಲ್ಫಿ ವಿಡಿಯೋದಲ್ಲಿ ಸಿ.ಎಂ.‌ಗೆ ತನ್ನ ಅಂತ್ಯಸಂಸ್ಕಾರಕ್ಕೆ ಬರುವಂತೆ ಆಹ್ವಾನಿಸಿದ್ದಾನೆ.

ಸೆಲ್ಫಿ ವಿಡಿಯೋದಲ್ಲಿ ಸಂತೆಬಾಚಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸುವಂತೆ ಸಿ.ಎಂ.ಗೆ ಮನವಿ ಮಾಡಿದ್ದು, ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಸೇರಿದಂತೆ ಮೈತ್ರಿ ಪಕ್ಷದವರು ಕುಮಾರಣ್ಣ ಅವರ ಕಾಲೆಳೆಯದಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ಸಚಿವ ಡಿ.ಕೆ. ಶಿವಕುಮಾರ್​ಗೂ ಸರ್ಕಾರ ಉಳಿಸುವಂತೆ ರೈತ ಕೋರಿದ್ದಾರೆ.

ಸೆಲ್ಫಿ ವಿಡಿಯೋ ಮಾಡಿ ರೈತ ಆತ್ಮಹತ್ಯೆ

ತನ್ನ ಸಾವಿನ ನಂತರ ಮಗ ಸಾಲ ತೀರಿಸುತ್ತಾನೆ, ಆದ್ರೆ ಯಾರೂ ಕೂಡ ಆತನಿಗೆ ಒತ್ತಡ ಹಾಕಬೇಡಿ. ತಮಗೂ ಕೆಲವರ ಕಡೆಯಿಂದ ಹಣ ಬರಬೇಕಿದದ್ದು, ಸಾವಿನ ಬಳಿಕವಾದ್ರೂ ಆ ಹಣ ಕೊಡಿ. ಎಂಟು ದಿನಗಳ ಹಿಂದೆ ತಾನು ಸಾಯುವ ಮನಸ್ಸು ಮಾಡಿದ್ದೆ, ಆದ್ರೆ ಕುಟುಂಬದವರು ಧರ್ಮಸ್ಥಳಕ್ಕೆ ಹೋಗಿದ್ರು. ಸಣ್ಣ ಅಪಘಾತದಿಂದ ಅವ್ರು ಬರಲು ತಡವಾಯ್ತು. ಅವ್ರ ಮುಖ ನೋಡಿ ಸಾಯ್ತಿರೋದಾಗಿ ರೈತ ಸುರೇಶ್​ ಭಾವಕರಾಗಿ ಮಾತನಾಡಿದ್ದಾರೆ. ಬಳಿಕ ಸಾವಿನ ಮನೆ ಕದ ತಟ್ಟಿದ್ದಾರೆ.

Intro:ಮಂಡ್ಯ: ಸಾಲಭಾಧೆ ತಾಳಲಾರದೆ ಸೆಲ್ಫಿ ವಿಡಿಯೋ ಮಾಡಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್.ಪೇಟೆ ತಾಲೂಕಿನ ಆಘಲಯ ಗ್ರಾಮದಲ್ಲಿ ನಡೆದಿದೆ.
ಸಿ.ಎಂ.ಕುಮಾರಸ್ವಾಮಿಯ ಅಪ್ಪಟ ಅಭಿಮಾನಿಯಾಗಿದ್ದ ರೈತ ಸುರೇಶ್(46) ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷ ಸೇವಿಸಿ ಆತ್ಮಹತ್ಯೆಗೂ‌ ಮುನ್ನ ಸೆಲ್ಫಿ ವಿಡಿಯೋದಲ್ಲಿ ಸಿ.ಎಂ.‌ಗೆ ತನ್ನ ಸಾವಿಗೆ ಬರುವಂತೆ ಆಹ್ವಾನಿಸಿದ್ದಾನೆ.
ಸೆಲ್ಪಿ ವಿಡಿಯೋದಲ್ಲಿ ಸಂತೇ ಬಾಚಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸುವಂತೆ ಸಿ.ಎಂ. ಗೆ ಮನವಿ ಮಾಡಿಕೊಂಡಿದ್ದಾನೆ. ಸಿಎಂ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಮತ್ತು ಶಾಸಕ ನಾರಾಯಣಗೌಡರಿಗೂ ಮನವಿ ಮಾಡಿಕೊಂಡಿದ್ದಾನೆ.
ಬರಪೀಡಿತ ಈ ಭಾಗಕ್ಕೆ ದಯಮಾಡಿ ಈ ಸಹಾಯ ಮಾಡಿ ರೈತರನ್ನು ಬದಕಿಸಿ. ಸಿ.ಎಂ. ಕುಮಾರಸ್ವಾಮಿ ನಾಲ್ಕು ವರ್ಷವೂ ಮುಖ್ಯಮಂತ್ರಿಯಾಗಿರಲಿ ಎಂದು ಹಾರೈಸಿದ್ದಾನೆ.
ವಿರೋಧ ಪಕ್ಷದ ಯಡಿಯೂರಪ್ಪ ಸೇರಿ ಮೈತ್ರಿ ಪಕ್ಷದವರು ಕುಮಾರಣ್ಣ ಕಾಲೆಳೆಯದಂತೆ ಮನವಿ ಮಾಡಿದ್ದೂ ಅಲ್ದೆ ಡಿ.ಕೆ.ಶಿವಕುಮಾರ್ ಗೂ ಕೂಡ ಸರ್ಕಾರ ಉಳಿಸುವಂತೆ ಮನವಿ ಮಾಡಿದ್ದಾನೆ.
ತಾನು ಸತ್ತ ನಂತರ ತನ್ನ ಮಗ ಸಾಲ ತೀರಿಸ್ತಾನೆ ಯಾರು ಆತನಗೆ ಒತ್ತಡ ಹಾಕಬೇಡಿ. ತಮಗೆ ಹಣ ಕೊಡಬೇಕಾಗಿದೆ, ಸತ್ತ ಮೇಲಾದ್ರು ಹಣ ಕೊಡಿ. ಎಂಟು ದಿನಗಳ ಹಿಂದೆ ತಾನು ಸಾಯುವ ಮನಸ್ಸು ಮಾಡಿದ್ದೆ, ಆದ್ರೆ ಕುಟುಂಬದವರು ಧರ್ಮಸ್ಥಳ ಕ್ಕೆ ಹೋಗಿದ್ರು. ಸಣ್ಣ ಅಪಘಾತದಿಂದ ಅವ್ರು ಬರಲು ತಡವಾಯ್ತು. ಅವ್ರ ಮುಖ ನೋಡಿ ಸಾಯ್ತಿರೋದಾಗಿ ರೈತ ಹೇಳಿದ್ದಾನೆ.Body:ಕೊತ್ತತ್ತಿ ಯತೀಶ್ ಬಾಬುConclusion:
Last Updated : Jun 17, 2019, 10:20 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.