ETV Bharat / state

ಗಣಿ ಪ್ರದೇಶ ಹಾಗೂ ಕ್ರಷರ್‌ಗಳಿಗೆ ಮೈನಿಂಗ್‌ ಮಿನಿಸ್ಟರ್‌‌ ಭೇಟಿ.. ಆದರೆ, ಜನರ ನಿರೀಕ್ಷೆ ನಿಜವಾಯ್ತಾ?

ಅದರಂತೆ ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ. ಆದ್ರೆ, ಸಚಿವರ ಭೇಟಿ ನೆಪ ಮಾತ್ರಕ್ಕೆಂದು ಕಾಣುತ್ತಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ..

cc patil visited mandya district; complete details are here !
ಗಣಿ ಪ್ರದೇಶ ಹಾಗೂ ಕ್ರಷರ್‌ಗಳಿಗೆ ಗಣಿ ಸಚಿವರ ಭೇಟಿ....ಹೇಗಿತ್ತು ಜಿಲ್ಲಾ ಪ್ರವಾಸ?
author img

By

Published : Jan 3, 2021, 1:28 PM IST

ಮಂಡ್ಯ : ಜಿಲ್ಲೆಯ ಹಲವು ಗಣಿ ಪ್ರದೇಶ ಹಾಗೂ ಕ್ರಷರ್‌ಗಳಿಗೆ ಇಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದ್ರೆ, ಹಲವು ನಿರೀಕ್ಷೆಯನ್ನಿಟ್ಟುಕೊಂಡಿದ್ದ ಜನರಿಗೆ ಸಚಿವರ ಭೇಟಿ ನೆಪ ಮಾತ್ರಕ್ಕೆಂದು ಕಾಣುತ್ತಿದೆ ಎನ್ನುವ ಮಾತುಗಳು ಕೆಲವೆಡೆ ಕೇಳಿ ಬರುತ್ತಿವೆ.

ಗಣಿ ಪ್ರದೇಶ ಹಾಗೂ ಕ್ರಷರ್‌ಗಳಿಗೆ ಗಣಿ ಸಚಿವರ ಭೇಟಿ

ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕನ್ನಡಿಗರ ಜೀವನಾಡಿ ಕನ್ನಂಬಾಡಿ ಅಣೆಕಟ್ಟೆಗೂ ಕಂಟಕ ಎದುರಾಗಿದೆ. ಕೆಆರ್‌ಎಸ್ ಅಣೆಕಟ್ಟು ಹಿತದೃಷ್ಟಿಯಿಂದ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕುವಂತೆ ಸಾಕಷ್ಟು ಕೂಗು ಕೇಳಿ ಬರ್ತಿದೆ.

ಇಂದು ಮಂಡ್ಯ ಜಿಲ್ಲೆಯಲ್ಲಿ ಸಚಿವ ಸಿ ಸಿ ಪಾಟೀಲ್ ಪ್ರವಾಸ ಹಮ್ಮಿಕೊಂಡಿದ್ದರು. ಸಚಿವರ ಪ್ರವಾಸದ ಹಿನ್ನೆಲೆ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕುತ್ತಾರೆ. ಕನ್ನಂಬಾಡಿ ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ದಿಟ್ಟ ನಿರ್ಧಾರ ಕೈಗೊಳ್ಳುತ್ತಾರೆಂದು ಜನ ವಿಶ್ವಾಸವಿರಿಸಿದ್ದರು. ಇನ್ನು, ಸಚಿವರನ್ನು ಭೇಟಿಯಾದ ಸ್ಥಳೀಯರು ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದ್ರು.

ಈ ಸುದ್ದಿಯನ್ನೂ ಓದಿ: ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ : ಸಚಿವ ಸಿ ಸಿ ಪಾಟೀಲ್ ಗುಡುಗು

ಅದರಂತೆ ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ. ಆದ್ರೆ, ಸಚಿವರ ಭೇಟಿ ನೆಪ ಮಾತ್ರಕ್ಕೆಂದು ಕಾಣುತ್ತಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಯಾಕೆ ಅಂತೀರಾ, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಎರಡು ತಾಲೂಕುಗಳ ಗಣಿಗಾರಿಕೆ ಪ್ರದೇಶಗಳಿಗೆ ಗಣಿ ಸಚಿವರ ಇಂದಿನ ಪ್ರವಾಸ ಕಾರ್ಯಕ್ರಮ ನಿಗದಿಯಾಗಿತ್ತು.

ಆದರೆ, ಎರಡು ಗಂಟೆ ತಡವಾಗಿ ಬಂದ ಸಚಿವರು, ಶ್ರೀರಂಗಪಟ್ಟಣ ತಾಲೂಕಿನ ಟಿ ಎಂ ಹೊಸೂರು, ಕಾಳೇನಹಳ್ಳಿ, ಚನ್ನನಕೆರೆ, ಮುಂಡಗದೊರೆಯ ಮೂರು ಕಲ್ಲು ಕ್ವಾರಿ ಹಾಗೂ ಎರಡು ಕ್ರಷರ್ ಘಟಕಗಳಿಗೆ ಭೇಟಿ ನೀಡಿದ್ದು, ಜಿಲ್ಲಾ ಪ್ರವಾಸ ಅಲ್ಲಿಗೆ ಮಾತ್ರ ಸೀಮಿತವಾಗಿತ್ತು.

ಅಲ್ಲಿಂದ ನೇರವಾಗಿ ಕೆಆರ್‌ಎಸ್‌ನಲ್ಲಿರುವ ಖಾಸಗಿ ಹೋಟೆಲ್​​​ನಲ್ಲಿ ಊಟ ಮಾಡಿ, ಬಳಿಕ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ರು. ಇದಾದ ನಂತರ ಮಾಧ್ಯಮಗಳೊಂದಿಗೆ ಜಿಲ್ಲಾ ಪ್ರವಾಸ ಕುರಿತು ಮಾಹಿತಿ ಹಂಚಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.