ETV Bharat / state

ಮಾಹಿತಿ ಕೊರತೆ: ಅಧಿಕಾರಿಗಳಿಗೆ ಬೆವರಿಳಿಸಿದ ಸಚಿವ ಸಿ.ಟಿ.ರವಿ

ಜಿಲ್ಲೆಯ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಸಂಬಂಧ ಅಧಿಕಾರಿಗಳಿಂದ ಆಕ್ಷನ್ ಪ್ಲಾನ್ ರೂಪಿಸುವಂತೆ ಸಲಹೆ ನೀಡಿದ ಸಚಿವ ಸಿ.ಟಿ.ರವಿ.

ಮಾಹಿತಿ ಕೊರತೆ: ಅಧಿಕಾರಿಗಳಿಗೆ ಬೆವರಿಳಿಸಿದ ಸಚಿವ ಸಿ.ಟಿ.ರವಿ
author img

By

Published : Sep 9, 2019, 5:59 PM IST

ಮಂಡ್ಯ: ನಿಮ್ಮ ಅಧಿಕಾರಿ ಏನು ಮಾವನ ಮನೆಗೆ ಹೋಗಿದ್ದರಾ. ಮಾಹಿತಿ ಇಲ್ಲದೆ ಯಾಕೆ ಬರ್ತಿರಾ.? ಹೀಗಂತ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಸಚಿವ ಸಿ.ಟಿ. ರವಿ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು‌.

ಮಾಹಿತಿ ಕೊರತೆ: ಅಧಿಕಾರಿಗಳಿಗೆ ಬೆವರಿಳಿಸಿದ ಸಚಿವ ಸಿ.ಟಿ.ರವಿ

ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಸಭೆ ನಡೆಸಿದ ಅವರು, ಗಗನಚುಕ್ಕಿ ರೋಪ್ ವೇ ಯೋಜನೆ ಸಂಬಂಧ ಮಾಹಿತಿ ಕೇಳಿದ್ದು, ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಗೈರಿಗೆ ಸಚಿವರು ಗರಂ ಆಗಿ ಕ್ಲಾಸ್ ತೆಗೆದುಕೊಂಡರು.

ಇನ್ನು ಜಿಲ್ಲೆಯ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಸಂಬಂಧ ಅಧಿಕಾರಿಗಳಿಂದ ಆಕ್ಷನ್ ಪ್ಲಾನ್ ರೂಪಿಸುವಂತೆ ಸಲಹೆ ನೀಡಿದರು. ಜೊತೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಇತಿಹಾಸ ಕುರಿತು ವಿದ್ಯಾರ್ಥಿಗಳ ಸಹಾಯದಿಂದ ವರದಿ ಸಿದ್ಧಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಜಲಪಾತೋತ್ಸವ:

ದಸರಾ ಸಮಯದಲ್ಲಿ ಗಗನಚುಕ್ಕಿಯಲ್ಲಿ ಜಲಪಾತೋತ್ಸವ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಎಲ್ಲಾ ರೀತಿಯ ತಯಾರಿ ನಡೆಸುವಂತೆ ಅಧಿಕಾರಿಗಳಿಗೆ ಸಚಿವ ಸಿ.ಟಿ. ರವಿ ಸೂಚನೆ ನೀಡಿದರು. ಜೊತೆಗೆ, ಮೇಲುಕೋಟೆ ಅಭಿವೃದ್ಧಿ ಕುರಿತು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಪ್ರಾಚೀನ ಸ್ಮಾರಕಗಳು ಇರುವ ಗ್ರಾಮಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಉತ್ತೇಜನ, ಟ್ಯಾಕ್ಸಿ ಯೋಜನೆ ಕುರಿತು ಮಾಹಿತಿ ಕಲೆ ಹಾಕಿದರು.

ಸಚಿವರಿಗೆ ಸಾಥ್ ನೀಡಿದ ಜೆಡಿಎಸ್ ಎಂಎಲ್‌ಎಗಳು:

ಸಚಿವ ಸಿ.ಟಿ. ರವಿಗೆ ಜೆಡಿಎಸ್ ಶಾಸಕರಾದ ಸಿ.ಎಸ್. ಪುಟ್ಟರಾಜು, ಎಂ. ಶ್ರೀನಿವಾಸ್, ಡಾ. ಅನ್ನದಾನಿ ಸಾಥ್ ನೀಡಿ, ಕೆಲವೊಂದು ಮಾಹಿತಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಚಿವರು ಇಲಾಖೆ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಜೆಡಿಎಸ್ ಎಂಎಲ್‌ಎಗಳಿಗೆ ಚಟಾಕಿ ಹಾರಿಸಿದರು.

Intro:ಮಂಡ್ಯ: ನಿಮ್ ಅಧಿಕಾರಿ ಏನ್ ಮಾವನ ಮನೆಗೆ ಹೋಗಿದ್ದರಾ. ಮಾಹಿತಿ ಇಲ್ಲದೆ ಯಾಕೆ ಬರ್ತಿರಾ. ಹೀಗಂತ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಸಚಿವ ಸಿ.ಟಿ. ರವಿ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು‌.
ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಮಾಡುತ್ತಿದ್ದರು. ಗಗನಚುಕ್ಕಿ ರೂಪ್ ವೇ ಯೋಜನೆ ಸಂಬಂಧ ಮಾಹಿತಿ ಕೇಳಲಾಗಿ, ಹಿರಿಯ ಅಧಿಕಾರಿಗಳ ಗೈರಿಗೆ ಸಚಿವರು ಗರಂ ಆಗಿಯೇ ಕ್ಲಾಸ್ ತೆಗೆದುಕೊಂಡರು.

Body:ಇನ್ನು ಜಿಲ್ಲೆಯ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಕಲೆಯಾಗಿ ಆಕ್ಷನ್ ಪ್ಲಾನ್ ರೂಪಿಸುವಂತೆ ಸಲಹೆ ನೀಡಿದರು. ಜೊತೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಇತಿಹಾಸ ಕುರಿತು ವಿದ್ಯಾರ್ಥಿಗಳ ಸಹಾಯದಿಂದ ವರದಿ ಸಿದ್ಧಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಜಲಪಾತೋತ್ಸವ:

ದಸರಾ ಸಮಯದಲ್ಲಿ ಗಗನಚುಕ್ಕಿಯಲ್ಲಿ ಜಲಪಾತೋತ್ಸವ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಎಲ್ಲಾ ರೀತಿಯ ತಯಾರಿಗೆ ಅಧಿಕಾರಿಗಳಿಗೆ ಸಚಿವ ಸಿ.ಟಿ. ರವಿ ತಿಳಿಸಿದರು.
ಮೇಲುಕೋಟೆ ಅಭಿವೃದ್ಧಿ ಕುರಿತು ಅಧಿಕಾರಿಗಳ ಜೊತೆ ಸಮಾಲೋಚನೆ, ಪ್ರಾಚೀನ ಸ್ಮಾರಕಗಳು ಇರುವ ಗ್ರಾಮಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಉತ್ತೇಜನ, ಟ್ಯಾಕ್ಸಿ ಯೋಜನೆ ಕುರಿತು ಮಾಹಿತಿ ಕಲೆ ಹಾಕಿದರು.

ಸಚಿವರಿಗೆ ಸಾಥ್ ನೀಡಿದ ಜೆಡಿಎಸ್ ಎಂಎಲ್‌ಎಗಳು:

ಸಚಿವ ಸಿ.ಟಿ. ರವಿಗೆ ಜೆಡಿಎಸ್ ಶಾಸಕರಾದ ಸಿ.ಎಸ್. ಪುಟ್ಟರಾಜು, ಎಂ. ಶ್ರೀನಿವಾಸ್, ಡಾ. ಅನ್ನದಾನಿ ಸಾಥ್ ನೀಡಿ, ಕೆಲವೊಂದು ಮಾಹಿತಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಚಿವರು ಇಲಾಖೆ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಜೆಡಿಎಸ್ ಎಂಎಲ್‌ಎಗಳಿಗೆ ಚಟಾಕಿ ಹಾರಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.