ETV Bharat / state

ಮಂಡ್ಯ ಉಸ್ತುವಾರಿ ವಹಿಸಿಕೊಳ್ಳಲು ನಿರುತ್ಸಾಹ ತೋರಿದ ಸಚಿವ ಅಶ್ವತ್ಥ್​ ನಾರಾಯಣ್ - ETV Bharath Kannada news

ಮಂಡ್ಯದಲ್ಲಿ ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ - ಉಸ್ತುವಾರಿ ಗೈರಿನಲ್ಲಿ ಸಚಿವ ಅಶ್ವತ್ಥ್ ನಾರಾಯಣ್​ಗೆ ಜವಾಬ್ದಾರಿ

c n ashwath narayan
ಅಶ್ವತ್ಥ್​ ನಾರಾಯಣ್
author img

By

Published : Feb 14, 2023, 9:12 PM IST

ಮಂಡ್ಯ ಉಸ್ತುವಾರಿ ವಹಿಸಿಕೊಳ್ಳಲು ನಿರುತ್ಸಾಹ ತೋರಿದ ಸಚಿವ ಅಶ್ವತ್ಥ್​ ನಾರಾಯಣ್

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇಂದು ಉಸ್ತುವಾರಿ ಗೈರಿನಲ್ಲಿ ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ಸಚಿವ ಅಶ್ವತ್ಥ್ ನಾರಾಯಣ್ ಮುಂದಾಗಿದ್ದು, ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು. ಮಂಡ್ಯ ತಾಲೂಕು ಸಾತನೂರು ಗ್ರಾಮದ ಕಂಬದ ನರಸಿಂಹ ದೇವಸ್ಥಾನ ಆವರಣದಲ್ಲಿ ಸಚಿವ ಅಶ್ವತ್ಥ್​ ನಾರಾಯಣ್ ಸಭೆಯನ್ನು ಉದ್ಘಾಟಿಸಿದರು.

ಪಕ್ಷ ಸಂಘಟನೆ ಉದ್ದೇಶದಿಂದ ನಡೆದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್, ಬಿಜೆಪಿ ಟಿಕೆಟ್ ಆಕಾಂಕ್ಷಿ ಅಶೋಕ್ ಜರಾಯಂ ಸೇರಿ‌ ಮೊದಲಾದವರು ಭಾಗಿ‌ಯಾಗಿದ್ದರು. ಇದಕ್ಕೂ ಮೊದಲು ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಂಡ್ಯ ಉಸ್ತುವಾರಿ ವಹಿಸಿಕೊಳ್ಳಲು ನಿರುತ್ಸಾಹ ತೋರಿದರು.

ಉಸ್ತುವಾರಿ ತೀರ್ಮಾನ ಸಿಎಂ ನೋಡಿಕೊಳ್ಳುತ್ತಾರೆ: "ಮಂಡ್ಯ ಉಸ್ತುವಾರಿ ಬಗ್ಗೆ ಕೇಳಿದರೆ ನನಗೆ ಗೊತ್ತಿಲ್ಲ, ಎಲ್ಲಾ ಸಿಎಂ ನೋಡಿಕೊಳ್ಳುತ್ತಾರೆ. ಯಾವುದೇ ಜಿಲ್ಲೆಯ ಉಸ್ತುವಾರಿ ನಿಶ್ಚಯ ಮಾಡುವುದು ಸಿಎಂ. ಮಂಡ್ಯ ಉಸ್ತುವಾರಿ ನೇಮಕ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ. ನಾನು ಇವತ್ತು ಪಕ್ಷದ ಕಾರ್ಯಕ್ರಮ ಇರುವುದರಿಂದ ಮಂಡ್ಯಗೆ ಬಂದಿದ್ದೇನೆ. ಪಕ್ಷ ಸಂಘಟನೆ ಮಾಡಲು ನಾನು ಇಲ್ಲಿ ಬಂದಿದ್ದೇನೆ. ಖಾಲಿ ಇರುವ ಉಸ್ತುವಾರಿಯನ್ನು ಸದ್ಯ ಸಿಎಂ ನಿರ್ವಹಣೆ ಮಾಡುತ್ತಿರುತ್ತಾರೆ" ಎಂದರು.

"ಯಾವ ಕಾಲದಲ್ಲಿ ಏನು ಮಾಡಬೇಕು ಎಂದು ಸಿಎಂ ನಿಶ್ಚಿಯ ಮಾಡುತ್ತಾರೆ. ಸಿಎಂ ಯಾರನ್ನು ನಿಶ್ಚಯಿಸುತ್ತಾರೆ ಅವರು ಕೆಲಸ ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಪಕ್ಷ ಸರ್ಕಾರ ಸಹಕಾರ ನೀಡುತ್ತದೆ. ಜವಾಬ್ದಾರಿಯನ್ನು ಹೊತ್ತುಕೊಳ್ಳಲು ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಇದ್ದಾರೆ. ಯಾರಿಗೆ ಮಂಡ್ಯ ಉಸ್ತುವಾರಿ ನೀಡಿದರು ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಮೇಲೆ ನನಗೆ ಪ್ರೀತಿ ಬಾಂಧವ್ಯ ಇರುವುದು ಒಂದು ಭಾಗ. ಜವಾಬ್ದಾರಿ ಮತ್ತು ಆಡಳಿತ ಇನ್ನೊಂದು ಭಾಗ. ಮುಖ್ಯಮಂತ್ರಿಗಳು ಸೂಕ್ತ ಎನ್ನಿಸಿದವರಿಗೆ ಕೊಡುತ್ತಾರೆ. ನನಗೆ ಉಸ್ತುವಾರಿ ನೀಡುವ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಯಾವ ಕಾಲದಲ್ಲಿ ಸಿಎಂ ಜವಾಬ್ದಾರಿ ನೀಡುತ್ತಾರೋ ಅದನ್ನು ನಿರ್ವಹಿಸುವುದು ನಮ್ಮ ಕೆಲಸ" ಎಂದರು.

ಪ್ರವೀಣ್ ಹತ್ಯೆ ಆರೋಪಿಯನ್ನು ಎಸ್​ಡಿಪಿಐ ಅಭ್ಯರ್ಥಿಯಾಗಿ ಘೋಷಣೆ ವಿಚಾರ‌ವಾಗಿ ಮಾತನಾಡಿದ ಅವರು, ಯಾವುದೇ ಒಬ್ಬ ವ್ಯಕ್ತಿಗೆ ಚಾರ್ಜ್​​​​ಶೀಟ್ ಆಗಿ ಕಾನೂನಿನಲ್ಲಿ ಅವಕಾಶ ಇದ್ದರೆ, ಕಾನೂನಿನ ಚೌಕಟ್ಟಿನಲ್ಲಿ ಅವರು ಸ್ಪರ್ಧೆ ಮಾಡುತ್ತಾರೆ. ಯಾವ ಪಕ್ಷದಿಂದ ಯಾರು ಸ್ಪರ್ಧೆ ಮಾಡ್ತಾರೆ ಅಂತ ನಾವು ನಿಶ್ಚಯ ಮಾಡಲ್ಲ. ಪ್ರತಿಯೊಬ್ಬ ಪ್ರಜೆಗೂ ಅವಕಾಶ ಇದೆ ಎಂದರು.

ರಾಮನಗರದಲ್ಲಿ ಜನಪರ ಕೆಲಸಗಳಾಗಿವೆ: ಇದೇ ವೇಳೆ, ರಾಮನಗರ ಜಿಲ್ಲೆಯ ವಿಚಾರವಾಗಿ ಮಾತನಾಡಿದ ಅವರು,"ಜನರ ವಿಶ್ವಾಸಗಳಿಸುವುದೇ ಯೋಜನೆಯಾಗಿದೆ. ಯಾರೇ ಸವಾಲು ಹಾಕಿದರು ಬನ್ನಿ ಅಂತ ಕರೆಯುತ್ತೇನೆ. ರಾಮನಗರದಲ್ಲಿ ಹಲವು ಜನಪರ ಕೆಲಸಗಳನ್ನು ಮಾಡಲಾಗಿದೆ. ಜನರ ವಿಶ್ವಾಸಗಳಿಸುವುದೇ ಸ್ಟ್ರಾಟಜಿ. ಆರೋಗ್ಯ, ಶೈಕ್ಷಣಿಕ, ಕೌಶಲ್ಯ, ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗಿದೆ. ನಮ್ಮ ಸಾಧನೆಗಳು ಹೇಗೆ, ಏನು ಅನ್ನೋದನ್ನು ತೋರಿಸಿದ್ದೇವೆ. ಯಾರೇ ಸವಾಲು ಹಾಕುವುದಿದ್ದರು ಬನ್ನಿ ಎಂದು ಕರೆಯುತ್ತೇನೆ. ರಾಮನಗರದಲ್ಲಿ ಹೆಚ್ಚಿನ ಕ್ಷೇತ್ರ ಗೆಲ್ಲಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾರಾಯಣಗೌಡರಿಗೆ ಫುಲ್​ ಮಾರ್ಕ್ಸ್​ ಕೊಟ್ಟ ಅಶ್ವತ್ಥ ನಾರಾಯಣ: ನಾರಾಯಣಗೌಡ್ರು ನಮ್ಮ ಬಹುದ್ದುರ್ ಗಂಡು ಎಂದು ಸಚಿವ ಅಶ್ವತ್ಥ್ ನಾರಾಯಣ್ ಹಾಡಿ ಹೊಗಳಿದರು. ಸಚಿವ ನಾರಾಯಣ ಗೌಡ ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರವಾಗಿ ಮಾತನಾಡಿ,"ನಾರಾಯಣ ಗೌಡರು ನಮ್ಮ ನಾಯಕರು ಅವರು ಸ್ವಾಭಿಮಾನಿಗಳು. ಬಿಜೆಪಿ ಪಕ್ಷ ಸಂಘಟನೆ ಮಾಡಿ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಸಂಘಟನೆ ಮಾಡಿದ್ದಾರೆ. ಕೆಆರ್ ಪೇಟೆಯನ್ನು ನವ ನಿರ್ಮಾಣ ಮಾಡಿ ಉತ್ತಮ ಅಭಿವೃದ್ದಿ ಮಾಡಿದ್ದಾರೆ. ರಾಜ್ಯಕ್ಕೆ ಕೊಟ್ಟ ಅವರ ಕಾರ್ಯಗಳು ಬಹಳ ಉತ್ತಮವಾಗಿದೆ. ನಾರಾಯಣ ಗೌಡರು ರಾಜ್ಯದಲ್ಲಿ ಜನಪರ ಕೆಲಸ ಮಾಡಿದ್ದಾರೆ. ನಾರಾಯಣ ಗೌಡರು ನಮ್ಮ ಬಹುದ್ದುರ್ ಗಂಡು. ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕಮಲ ಅರಳಿಸಿದ್ದಾರೆ. ಅವರ ನಾಯಕತ್ವ ಮತ್ತು ಅವರು ನಮ್ಮ ಪಕ್ಷದಲ್ಲಿ ಸದಾ ಕಾಲ ಇರುತ್ತದೆ" ಎಂದು ಹೊಗಳಿದ್ದಾರೆ.

ಇದನ್ನೂ ಓದಿ: ಡಿಫೆನ್ಸ್ ಏರೋಸ್ಪೇಸ್ ಪಾರ್ಕ್​ನಲ್ಲಿ ಬೇರೊಂದು ಸಂಸ್ಥೆಗೆ ಜಾಗ ವಿಚಾರ: ಮರಿತಿಬ್ಬೇಗೌಡ, ನಿರಾಣಿ ಜಟಾಪಟಿ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.