ಮಂಡ್ಯ: ಹುಚ್ಚ ವೆಂಕಟ್ ಹುಚ್ಚಾಟ ಇಂದು ಶ್ರೀರಂಗಪಟ್ಟಣದಲ್ಲಿ ಮುಂದುವರೆದಿದ್ದು, ಕಬ್ಬಿನ ಜ್ಯೂಸ್ ಕುಡಿದು ಹಣ ಕೊಡದೆ ಸಾರ್ವಜನಿಕರಿಂದ ಗೂಸಾ ತಿಂದಿದ್ದಾನೆ.
ಇಂದು ಸಂಜೆ ಶ್ರೀರಂಗಪಟ್ಟಣದ ರಸ್ತೆ ಬದಿಯ ಕಬ್ಬಿನ ಜ್ಯೂಸ್ ಸೆಂಟರ್ನಲ್ಲಿ ಜ್ಯೂಸ್ ಸೇವಿಸಿದ ಹುಚ್ಚ ವೆಂಕಟ್, ಹಣ ನೀಡದೆ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂದರ್ಭ ಸ್ಥಳದಲ್ಲೇ ಇದ್ದ ಸ್ಥಳೀಯರು ಸರಿಯಾಗಿ ಗೂಸಾ ನೀಡಿ ಬುದ್ಧಿ ಕಲಿಸಿದ್ದಾರೆ.
ನಿನ್ನೆಯಷ್ಟೇ ಶ್ರೀರಂಗಪಟ್ಟಣದಲ್ಲಿ ಕೂಗಾಡಿ ರಂಪಾಟ ಮಾಡಿದ್ದ ಹುಚ್ಚ ವೆಂಕಟ್, ಇಂದು ಸಹ ತನ್ನ ಹುಚ್ಚಾಟ ಮುಂದುವರೆಸಿದ್ದಾನೆ. ಕೆಲವರು ಸಾರ್ವಜನಿಕರನ್ನು ಸಮಾಧಾನ ಮಾಡಿ ಹುಚ್ಚ ವೆಂಕಟ್ನನ್ನು ಬಿಡಿಸಿದ್ದಾರೆ. ಇಲ್ಲವಾದರೆ ಮತ್ತಷ್ಟು ಧರ್ಮದೇಟು ಬೀಳುತ್ತಿತ್ತು.