ಮಂಡ್ಯ : ಸಂಕೀರ್ತನ ಯಾತ್ರೆ ಹೆಸರಿನಲ್ಲಿ ಮಸೀದಿ ದ್ವಂಸಗೊಳಿಸಲು ಸಂಚು ಮಾಡಿದ್ದಾರೆ ಎಂದು ನಗರದಲ್ಲಿ ಮುಸ್ಲಿಂ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿ ನೆಡೆಸಿದ ಕೆಲವು ಮುಸ್ಲಿಂ ವಿಕಾಸ ಮುಖಂಡರು, ಶ್ರೀರಂಗಪಟ್ಟಣದ ಮಸೀದಿ ಕೆಡವಲು ಹುನ್ನಾರ ನಡೆದಿದೆ ಎಂದು ಆರೋಪ ಮಾಡಿದರು. ಡಿಸೆಂಬರ್ 16ರಂದು ನಡೆಯುವ ಸಂಕೀರ್ತನ ಯಾತ್ರೆ ವೇಳೆ ಮಸೀದಿ ಮೇಲೆ ದಾಳಿ ಮಾಡಲು ಸಂಚು ಮಾಡಲಾಗಿದೆ.
ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸಂಕೀರ್ತನ ಯಾತ್ರೆ ಆಯೋಜಿಸಿದ್ದಾರೆ. ಆ ಕಾರ್ಯಕ್ರಮ ವೇಳೆ ಐತಿಹಾಸಿಕ ಮಸೀದಿ-ಎ-ಆಲಾ ಮಸೀದಿ ಧ್ವಂಸಗೊಳುವ ಹುನ್ನಾರ ನಡೆದಿದೆ. ಕರಪತ್ರ, ಸಾಮಾಜಿಕ ಜಾಲತಾಣದ ಮೂಲಕ ಮಸೀದಿ ಧ್ವಂಸಗೊಳಿಸುವುದಾಗಿ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಮಸೀದಿ ಜಾಗದಲ್ಲಿ ಹಿಂದೆ ಹನುಮ ಮಂದಿರವಿತ್ತು. ಮತ್ತೆ ಆ ಜಾಗದಲ್ಲಿ ಮಂದಿರ ಪುನರ್ ನಿರ್ಮಾಣ ಮಾಡುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಯೋಧ್ಯೆಯ ಬಾಬರೀ ಮಸೀದಿ ಧ್ವಂಸದಂತೆ ಶ್ರೀರಂಗಪಟ್ಟಣದ ಮಸೀದಿ ಧ್ವಂಸಕ್ಕೆ ಸಂಚು ನಡೆದಿದೆ.
ಶಾಂತಿ ಕದಡುವ ಹಾಗೂ ಸಾಮರಸ್ಯ ಹಾಳು ಮಾಡುವ ಉದ್ದೇಶದಿಂದಲೆ ಯಾತ್ರೆ ಆಯೋಜನೆ ಮಾಡಲಾಗಿದೆ.ಈ ಹಿನ್ನಲೆ ತಕ್ಷಣವೇ ಪೊಲೀಸ್ ಬಂದೋಬಸ್ತ್ ನಿಯೋಜಿಸುವಂತೆ ಆಗ್ರಹಿಸಿ ಮಂಡ್ಯ ಎಸ್ಪಿ ಯತೀಶ್ ಗೆ ಮನವಿ ಸಲ್ಲಿಸಿದರು.