ETV Bharat / state

ಕಾವೇರಿಗಾಗಿ ಅಂಬಿ ಬಿಟ್ಟು ಬೇರೆ ಯಾರಾದ್ರೂ ರಾಜೀನಾಮೆ ಕೊಟ್ಟಿದ್ದಾರಾ? ಸುಮಲತಾ ಪ್ರಶ್ನೆ

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀ‍ಶ್​ ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು ಜೆಡಿಎಸ್ ನಾಯಕರ ಒಂದೊಂದು ಹೇಳಿಕೆಗೂ ಎದುರೇಟು ಕೊಟ್ಟಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​
author img

By

Published : Apr 12, 2019, 4:40 PM IST

ಮಂಡ್ಯ: ಕಾವೇರಿಗಾಗಿ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು ಅಂಬರೀಶ್ ಒಬ್ಬರೆ. ಬೇರೆ ಯಾರಾದರೂ ಆ ಕೆಲಸ ಮಾಡಿದ್ದರೆ ತೋರಿಸಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು‌.

ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಸುಮಲತಾ, ಅವರ ಮಾತುಗಳಿಗೆ ಒಂದು ಸ್ಟ್ಯಾಂಡರ್ಡ್​ ಇಲ್ಲ. ಅವರಾಡುವ ಮಾತುಗಳನ್ನ ರಾಜ್ಯದ ಜನ ನೋಡುತ್ತಿದ್ದಾರೆ. ಯಾವತ್ತೂ ಅವರು ಹೆಣ್ಣಿಗೆ ಗೌರವ ಕೊಡುವ ಮಾತುಗಳನ್ನಾಡಿಲ್ಲ. ಆ ಪಕ್ಷದವರ ಬಾಯಲ್ಲಿ ಒಳ್ಳೆಯ ಮಾತುಗಳೇ ಇಲ್ಲ. ಹೀಗೆ ಮಾತನಾಡುತ್ತಾ ಜನರಲ್ಲಿ ಕೀಳು ಮಟ್ಟದ ಅಭಿಪ್ರಾಯವನ್ನ ಅವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್​ ನಾಯಕರ ಹೆಸರು ಉಲ್ಲೇಖಿಸದೆ ಟೀಕಿಸಿದರು.

ಜೆಡಿಎಸ್ ನಾಯಕರ ಹೇಳಿಕೆಗೆ ಎದುರೇಟು ಕೊಟ್ಟ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​

ಅವರು ಏನೇ ಮಾತನಾಡಿಕೊಂಡರು ಜನರು ಎಲ್ಲವನ್ನು ಆಲಿಸುತ್ತಿದ್ದಾರೆ. ಅವರ ಮಾತುಗಳಿಂದ ನನಗೇನೂ ತೊಂದರೆಯಾಗಲ್ಲ. ಸೋಲಿನ ಭಯದಿಂದ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಜನರು ಬುದ್ಧಿವಂತರಿದ್ದಾರೆ. ಯಾರೂ ಸುಮ್ಮನಿರುವುದಿಲ್ಲ ಎಂದರು.

ಇನ್ನು ಸಿದ್ದರಾಮಯ್ಯನವರ ಯಾವುದೇ ಹೇಳಿಕೆಗೆ ನಾನು ಕಾಮೆಂಟ್​ ಮಾಡಲ್ಲ. ಅವರ ಪರವಾಗಿ ಪ್ರಚಾರಕ್ಕೆ ಬರುವವರ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದರು.

Intro:ಮಂಡ್ಯ: ಕಾವೇರಿಗಾಗಿ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು ಅಂಬರೀಶ್ ಒಬ್ಬರೆ. ಇನ್ಯಾರಾದ್ರೂ ಆ ಕೆಲಸ ಮಾಡಿದ್ರೆ ತೋರಿಸಿ ಎಂದು ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು‌.
ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಸುಮಲತಾ ಅಂಬರೀಶ್, ಅವರ ಮಾತುಗಳಿಗೆ ಒಂದು ಸ್ಟ್ಯಾಂಡರ್ಡ್ ಇಲ್ಲ. ಅವರ ಮಾತುಗಳನ್ನ ಜನ ನೋಡ್ತಿದ್ದಾರೆ ಎನ್ನೋ ಮೂಲಕ ಟಾಂಗ್ ನೀಡಿದರು.
ಅವರು ಇರುವ ಸ್ಥಾನಕ್ಕೆ ಹೆಣ್ಣಿಗೆ ಗೌರವ ಕೊಡುವ, ಬೆಲೆ ಇರುವ ಮಾತುಗಳನ್ನೇ ಅವರು ಆಡಿಲ್ಲ.
ಆ ಪಕ್ಷದ ಯಾರೂ ಒಳ್ಳೆಯ ಮಾತು ಆಡಿಲ್ಲ. ಜನರಲ್ಲಿ ಕೀಳು ಮಟ್ಟದ ಅಭಿಪ್ರಾಯವನ್ನ ಅವರೇ ಸೃಷ್ಟಿಸಿಕೊಳ್ತಿದ್ದಾರೆ. ಅವರೇನೇ ಮಾತಾಡ್ಕೊಂಡ್ರು ಜನ ಅವರ ವಿರುದ್ಧವಾಗಿ ಇರ್ತಾರೆ ಬಿಡಿ. ಅವರ ಮಾತುಗಳಿಗೆ ನನ್ನಲ್ಲಿ ಏನೂ ಎಫೆಕ್ಟ್ ಇಲ್ಲ. ಅದರ ಬಗ್ಗೆ ನನಗೆ ಚಿಂತೆ ಇಲ್ಲ.
ಸೋಲಿನ ಭಯದಿಂದ ಈ ರೀತಿ ಒಂದೊಂದು ಮಾತು ಹೇಳ್ತಿದ್ದಾರೆ. ಅವರಿಗೆ ಸೋಲಿನ ಭಯವಿದೆ ಎಂದರು.
ಜನರೇನೂ ಮರುಳಾಗಲ್ಲ. ಅವರ ಮಾತಿಂದ ನನಗೇನೂ ಅರ್ಟ್ ಆಗಲ್ಲ. ನನಗೆ ಅರ್ಟ್ ಆದರೆ ಅದನ್ನ ನನ್ನಲ್ಲೇ ಇಟ್ಕೊಳ್ತೀನಿ. ಆದರೆ ನನಗಿಂತ ಜಾಸ್ತಿ ಅರ್ಟ್ ಆಗೋದು ಜನಕ್ಕೆ. ಜನ ಸುಮ್ಮನೇ ಇರಲ್ಲ ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ಕಾಮೆಂಟ್ ಮಾಡಲ್ಲ. ಅವರ ಪರವಾಗಿ ಪ್ರಚಾರಕ್ಕೆ ಬರುವವರ ಬಗ್ಗೆ ನಾನೇನೂ ಕಾಮೆಂಟ್ ಮಾಡಲ್ಲ ಎಂದರು.
2ಲಕ್ಷ ಅಂತರದಲ್ಲಿ ನಿಖಿಲ್ ಗೆಲ್ತಾರೆ ಅನ್ನೋ ವಿಚಾರವಾಗಿ, ಅವರ ಪರ ಪ್ರಚಾರಕ್ಕೆ ಬರುವವರು ಅವರ ಪರವೇ ಮಾತಾಡ್ತಾರೆ. ಅದರಲ್ಲಿ ಏನೂ ವಿಶೇಷ ಇಲ್ಲ ಬಿಡಿ ಎಂದರು.Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.