ETV Bharat / state

11 ವರ್ಷಗಳ ಬಳಿಕ ಕೆಆರ್‌ಎಸ್‌ ಅಣೆಕಟ್ಟು ಬಹುತೇಕ ಭರ್ತಿ; ಮುಂದಿನ ವಾರ ಸಿಎಂ ಬಾಗಿನ ಅರ್ಪಣೆ - KRS Dam is almost full fill

ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿ ಮಳೆಯಾಗಿದ್ದು, 11 ವರ್ಷದ ಬಳಿಕ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಕೆ.ಆರ್.ಎಸ್ ಜಲಾಶಯ ಬಹುತೇಕ ಭರ್ತಿ ಹಂತಕ್ಕೆ ಬಂದು ತಲುಪಿದೆ.‌

ಕೆಆರ್​ಎಸ್​
ಕೆಆರ್​ಎಸ್​
author img

By

Published : Oct 28, 2021, 9:24 AM IST

Updated : Oct 28, 2021, 9:30 AM IST

ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್​ಎಸ್​ ಡ್ಯಾಂ ದಶಕದ ಬಳಿಕ ಅಕ್ಟೋಬರ್ ಅಂತ್ಯದಲ್ಲಿ ಬಹುತೇಕ ತುಂಬಿದೆ.

ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್​ನಲ್ಲಿ ಡ್ಯಾಂ ಭರ್ತಿಯಾಗುತ್ತಿತ್ತು. ಆದ್ರೆ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಹಿನ್ನೆಲೆಯಲ್ಲಿ ಈ ವರ್ಷ ಅಣೆಕಟ್ಟು ಭರ್ತಿಯಾಗಿರಲಿಲ್ಲ. 2009ರ ಅಕ್ಟೋಬರ್ 28 ರಂದು ಡ್ಯಾಂ ತುಂಬಿತ್ತು.

ಡ್ಯಾಂ ತುಂಬಲು ಕಾಲು ಅಡಿ ಮಾತ್ರ ಬಾಕಿ:

ಡ್ಯಾಂ ಭರ್ತಿಯಾಗದಿರೋದ್ರಿಂದ ರೈತರು ಆತಂಕದಲ್ಲಿದ್ದರು‌. ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಶುರುವಾಗಿತ್ತು. ಆದರೆ ಮುಂಗಾರು ಅಂತ್ಯದಲ್ಲಿ ಮಳೆ ಬಿರುಸು ಪಡೆದುಕೊಂಡ ಪರಿಣಾಮ ನೀರಿನ ಒಳ ಹರಿವು ಹೆಚ್ಚಳವಾಗಿ 124.80 ಅಡಿ ಗರಿಷ್ಠ ಮಟ್ಟದಲ್ಲಿದ್ದ ಡ್ಯಾಂ, ಇಂದು 124.50 ಅಡಿಗೆ ತಲುಪಿದೆ. ಸಂಪೂರ್ಣವಾಗಿ ಅಣೆಕಟ್ಟೆ ಭರ್ತಿಯಾಗಲು ಕೇವಲ 0.30 ಅಡಿ ಅಷ್ಟೇ ಬಾಕಿ ಇದೆ‌.

KRS ಡ್ಯಾಂ ಬಹುತೇಕ ಭರ್ತಿ

ಫಲಿಸಿದ ಬಸವರಾಜ ಬೊಮ್ಮಾಯಿ ಪೂಜೆ :

ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ಅಕ್ಟೋಬರ್ 7ರಂದು ಸಿಎಂ ಬಸವರಾಜ ಬೊಮ್ಮಾಯಿ ಖ್ಯಾತ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪರ್ಜನ್ಯ ಹೋಮ ಹಾಗೂ ವಿಶೇಷ ಪೂಜೆ ನಡೆಸಿದ್ದರು. ಈ ವೇಳೆ ಸಿಎಂ ಜೊತೆ ಸಚಿವ ನಾರಾಯಣಗೌಡ ಸಹ ಪಾಲ್ಗೊಂಡಿದ್ದರು. ಈ ವಿಶೇಷ ಪೂಜೆ ಬಳಿಕ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.

ಇಂದಿನ‌ ನೀರಿನ ಮಟ್ಟ:

ಜಲಾಶಯ ಭರ್ತಿಯಾಗಲು ಕೇವಲ ಕಾಲು ಅಡಿ ಬಾಕಿ ಇದೆ. ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 124.30 ಅಡಿ‌ ಇದೆ. ಸದ್ಯಕ್ಕೆ ಡ್ಯಾಂಗೆ 11,345 ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, ಡ್ಯಾಂನಿಂದ 3,608 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದಾರೆ. ಜಲಾಶಯದಲ್ಲಿ ಒಟ್ಟು 49.452 ಟಿಎಂಸಿ ನೀರಿನ ಶೇಖರಣಾ ಸಾಮರ್ಥ್ಯವಿದ್ದು, ಸದ್ಯಕ್ಕೆ 49.033 ಟಿಎಂಸಿ ನೀರು ಶೇಖರಣೆಯಾಗಿದೆ.

ಮುಂದಿನ ವಾರ ಸಿಎಂ ಬೊಮ್ಮಾಯಿ ಬಾಗಿನ:

ಸದ್ಯಕ್ಕೆ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಬಸವರಾಜ ಬೊಮ್ಮಾಯಿ ಉಪ ಚುನಾವಣೆ ಮುಗಿದ ಬಳಿಕ ಡ್ಯಾಂಗೆ ಸಂಪ್ರದಾಯದಂತೆ ಬಾಗಿನ ಸಮರ್ಪಣೆ ಮಾಡಲಿದ್ದಾರೆ.

Last Updated : Oct 28, 2021, 9:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.