ಮಂಡ್ಯ: ಪೂಜೆ ಮಾಡುತ್ತಿರುವಾಗಲೇ ಗರ್ಭಗುಡಿಯಲ್ಲಿ ಅರ್ಚಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಮಂಗಲ ಗ್ರಾಮದ ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಸಂತೆಕಸಲಗೆರೆ ಗ್ರಾಮದ ಚಂದ್ರಶೇಖರ್ (51) ಮೃತಪಟ್ಟ ಅರ್ಚಕ. ಪೂಜೆ ವೇಳೆ ಹೃದಯಾಘಾತದಿಂದ ಗರ್ಭಗುಡಿಯಲ್ಲೇ ಕುಸಿದು ಸಾವಿಗೀಡಾಗಿದ್ದಾರೆ.
ಅರ್ಚಕನ ಸಾವಿನಿಂದ ಗ್ರಾಮದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಹೃದಯಾಘಾತದಿಂದ ಸಾವನ್ನಪ್ಪಿರುವುದು ಎಂದು ತಿಳಿದು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.