ETV Bharat / state

ಮಂಡ್ಯದಲ್ಲಿ 688 ಜನರಿಗೆ ಕೊರೊನಾ ದೃಢ, ಮೂವರು ಸಾವು

ಮಂಡ್ಯದಲ್ಲಿ ಕೊರೊನಾ ಆರ್ಭಟ ದಿನೇ ದಿನೇ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ ವರದಿಯಾದ ಸೋಂಕಿತರು, ಸಾವು ನೋವಿನ ವರದಿ ಇಲ್ಲಿದೆ.

corona in Mandya
ಮಂಡ್ಯ ಕೊರೊನಾ ಸುದ್ದಿ
author img

By

Published : Apr 25, 2021, 6:40 AM IST

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ನಿನ್ನೆ 688 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ 216 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಮೂವರು ಸೋಂಕಿಗೆ ಬಲಿಯಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 24,760 ಜನರಿಗೆ ಕೊರೊನಾ ದೃಢಪಟ್ಟಿದ್ದು, 21,405 ಮಂದಿ ಗುಣಮುಖರಾಗಿದ್ದಾರೆ. ಮಿಮ್ಸ್​ನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,173 ಆಗಿದೆ.

ಈವರೆಗೆ ಜಿಲ್ಲೆಯಲ್ಲಿ 181 ಮಂದಿ ಕೋವಿಡ್​ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ರಾಜ್ಯದ ರೆಮ್ಡಿಸಿವಿರ್, ಆಕ್ಸಿಜನ್ ಹಂಚಿಕೆ ಹೆಚ್ಚಿಸಿದ ಕೇಂದ್ರ ಸರ್ಕಾರ; ಸಿಎಂ ಹರ್ಷ

ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾಗಳ ಮಾಹಿತಿ ಪ್ರಕಾರ, ಮಂಡ್ಯ 251, ಮದ್ದೂರು 67, ಮಳವಳ್ಳಿ 38, ಪಾಂಡವಪುರ 38, ಶ್ರೀರಂಗಪಟ್ಟಣ 84, ಕೆ.ಆರ್.ಪೇಟೆ 80, ನಾಗಮಂಗಲ 121 ಹಾಗು ಹೊರ ಜಿಲ್ಲೆಯ 9 ಪ್ರಕರಣಗಳು ದಾಖಲಾಗಿವೆ.

ನಿನ್ನೆ 3,469 ಜನರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಇಲ್ಲಿಯವರೆಗೆ 1,51,250 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.