ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಡಿವಾಣ ಹಾಕುವುದಕ್ಕೆ ಜಿಲ್ಲಾಡಳಿತ ಯತ್ನಿಸುತ್ತಲೇ ಇದ್ದು, ಇತ್ತ ಜನ ವೀಕೆಂಡ್ ಕರ್ಫ್ಯೂಯಿಂದಾಗಿ ಮದ್ಯ ಖರೀದಿಸಲು ಕೋವಿಡ್ ನಿಯಮ ಉಲ್ಲಂಘಿಸಿರುವುದು ಕಂಡು ಬಂತು.
520 ಕೊರೊನಾ ಪ್ರಕರಣಗಳು...
ಶುಕ್ರವಾರ ಜಿಲ್ಲೆಯಲ್ಲಿ 520 ಮಂದಿಗೆ ಕೊರೊನಾ ಸೋಂಕು ವಕ್ಕರಿಸಿದೆ. ಈ ಮೂಲಕ ಸೋಂಕಿತರ ಸಂಖ್ಯೆ 24,072 ಕ್ಕೆ ಏರಿಕೆಯಾಗಿದೆ. ನಿನ್ನೆ 142 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 21,189 ಮಂದಿ ಗುಣಮುಖವಾಗಿದ್ದಾರೆ.
2,704 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ನಾಲ್ವರು ಕೊರೊನಾಗೆ ಬಲಿಯಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 178 ಕೋವಿಡ್ ಸಾವಿನ ಸಂಖ್ಯೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಾಹಿತಿ ಪ್ರಕಾರ, ಮಂಡ್ಯ 163, ಮದ್ದೂರು 67, ಮಳವಳ್ಳಿ 39, ಪಾಂಡವಪುರ 46, ಶ್ರೀರಂಗಪಟ್ಟಣ 42, ಕೆ.ಆರ್.ಪೇಟೆ 61, ನಾಗಮಂಗಲ 92, ಹೊರ ಜಿಲ್ಲೆಯ 10 ಪ್ರಕರಣ ದಾಖಲಾಗಿವೆ.
ಲಾಕ್ಡೌನ್ ಭೀತಿ, ಮದ್ಯಗೆ ಮೊರೆ...
ನಿನ್ನೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಹೀಗಾಗಿ ನಗರದ ಬಾರ್ಗಳ ಬಳಿ ಎಣ್ಣೆಗಾಗಿ ಜನರು ಮುಗಿಬಿದ್ದಿದ್ದರು. ಮಂಡ್ಯ ನಗರದ ಮಾರ್ತಾಂಡ ಬಾರ್ ಬಳಿ ಸಾರ್ವಜನಿಕರು ಕೊರೊನಾ ಭಯ ಬಿಟ್ಟು ಮದ್ಯ ಖರೀದಿಸಲು ಮುಗಿಬಿದ್ದರು. ಮದ್ಯಪ್ರಿಯರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮರೆತು ಮದ್ಯ ಖರೀದಿ ಮಾಡಿದ್ದರು. ನಿನ್ನೆ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ರ ವರೆಗೆ ಬಾರ್ ಬಂದ್ ಹಿನ್ನೆಲೆ ಈ ದೃಶ್ಯ ಕಂಡು ಬಂತು.