ಕುಷ್ಟಗಿ (ಕೊಪ್ಪಳ): ಬೆಂಗಳೂರಿನಿಂದ ಸ್ವಗ್ರಾಮ ದೋಟಿಹಾಳಕ್ಕೆ ಬಂದು ಸ್ವಯಂಪ್ರೇರಿತ ಹೋಂ ಕ್ವಾರಂಟೈನ್ ಆಗಿದ್ದ ಯುವಕನಿಗೆ ಕೊರೊನಾ ಸೋಂಕು ದೃಢವಾಗಿದೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕಿತನ ಮನೆಯ ಅಕ್ಕಪಕ್ಕ ರಸ್ತೆ ಸೀಲ್ಡೌನ್ಗೆ ಗ್ರಾ.ಪಂ ಕ್ರಮ ಕೈಗೊಂಡಿದೆ. ದೋಟಿಹಾಳ ಗ್ರಾಮದ ಹೊರವಲಯದ ನವ ನಗರದ ನಿವಾಸಿ, ಬೆಂಗಳೂರು ವೈಟ್ಫೀಲ್ಡ್ನ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದ.
ಈ ಯುವಕ ಕಳೆದ ಜುಲೈ 14ರಂದು ಬೆಂಗಳೂರಿನಿಂದ ನೇರವಾಗಿ ಕುಷ್ಟಗಿಗೆ ಆಗಮಿಸಿ, ಅದೇ ದಿನ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಗಾಗಿದ್ದ. ಅಲ್ಲದೆ ಸ್ವಯಂ ಪ್ರೇರಿತವಾಗಿ ಹೋಂ ಕ್ವಾರಂಟೈನ್ನಲ್ಲಿದ್ದ.
ಇಂದು ಬೆಳಗ್ಗೆ ಕೊರೊನಾ ದೃಢವಾಗಿದ್ದು, ಸೋಂಕಿತ ಯುವಕನನ್ನು ಯಲಬುರ್ಗಾ ತಾಲೂಕಿನ ಕೋವಿಡ್ ಕೇರ್ ಸೆಂಟರ್ಗೆ ಕರೆದೊಯ್ಯಲಾಗಿದೆ. ದೋಟಿಹಾಳ ಗ್ರಾಮದ ಮೊದಲ ಕೊರೊನಾ ಪ್ರಕರಣ ಇದಾಗಿದೆ.