ETV Bharat / state

ಬಳ್ಳಾರಿ ನಗರದಿಂದ ಪತ್ನಿ ಲಕ್ಷ್ಮೀ ಅರುಣಾ ಸ್ಪರ್ಧೆ : ಜನಾರ್ದನ ರೆಡ್ಡಿ ಘೋಷಣೆ - ಕಲ್ಯಾಣ ರಾಜ್ಯ ಪ್ರಗತಿ ಪಕ್ಷ

ಬಳ್ಳಾರಿ ನಗರದಲ್ಲಿ ಪತ್ನಿ ಲಕ್ಷ್ಮೀ ಅರುಣಾ ಅಭ್ಯರ್ಥಿ - ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಣೆ - ಕಲ್ಯಾಣ ರಥಯಾತ್ರೆಗೆ ಚಾಲನೆ

wife-laxmi-aruna-contest-from-bellary-city-says-janardhana-reddy
ಬಳ್ಳಾರಿ ನಗರದಿಂದ ಪತ್ನಿ ಲಕ್ಷ್ಮೀ ಅರುಣಾ ಸ್ಪರ್ಧೆ : ಜನಾರ್ದನ ರೆಡ್ಡಿ ಘೋಷಣೆ
author img

By

Published : Jan 31, 2023, 4:56 PM IST

Updated : Jan 31, 2023, 7:16 PM IST

ಬಳ್ಳಾರಿ ನಗರದಿಂದ ಪತ್ನಿ ಲಕ್ಷ್ಮೀ ಅರುಣಾ ಸ್ಪರ್ಧೆ : ಜನಾರ್ದನ ರೆಡ್ಡಿ ಘೋಷಣೆ

ಗಂಗಾವತಿ (ಕೊಪ್ಪಳ): ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಪತ್ನಿ ಲಕ್ಷ್ಮೀ ಅರುಣಾ ಸ್ಪರ್ಧೆ ಮಾಡುತ್ತಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಣೆ ಮಾಡಿದ್ದಾರೆ. ತಾಲೂಕಿನ ಆನೆಗೊಂದಿ ಗ್ರಾಮದ ರಂಗನಾಥ ದೇವಾಲಯದ ಆವರಣದಲ್ಲಿ ಇಂದು ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪಕ್ಷ ಸ್ಥಾಪಿಸಿ ಕೇವಲ 30 ದಿನವಾಗಿದೆ. ಇಷ್ಟರಲ್ಲಿಯೇ ಕೆಆರ್​ಪಿಪಿ ಇಡೀ ರಾಜ್ಯದ ನಾಯಕರ ನಿದ್ದೆಗೆಡಿಸಿದೆ ಎಂದು ಹೇಳಿದರು.

wife-laxmi-aruna-contest-from-bellary-city-says-janardhana-reddy
ಕಲ್ಯಾಣ ರಥಯಾತ್ರೆಯಲ್ಲಿ ಜನಾರ್ದನ ರೆಡ್ಡಿ ಕುಟುಂಬ

ಸ್ವಂತ ಪಕ್ಷ ಸ್ಥಾಪಿಸದಂತೆ ಸಾಕಷ್ಟು ಕೈಗಳು ನನ್ನನ್ನು ತಡೆಯಲು ಯತ್ನಿಸಿದವು. ಆದರೆ ಇದಾವುದಕ್ಕೂ ನಾನು ಜಗ್ಗಿಲ್ಲ. ಗಂಗಾವತಿಯಿಂದ ನನ್ನನ್ನು ಜನ ಆಯ್ಕೆ ಮಾಡಿದರೆ ಇಡೀ ರಾಜ್ಯಕ್ಕೆ ನಾನು ಮಾದರಿಯಾಗಿ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ ಎಂದರು. ಇದೇ ವೇಳೆ ವಿಶ್ವ ವಿಖ್ಯಾತ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಟ್ರಸ್ಟ್ ರಚಿಸಿ ಐದು ಸಾವಿರ ಕೋಟಿ ಅನುದಾನ ನೀಡಲಾಗುವುದು. ಗಂಗಾವತಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಟೆಕ್ಸ್​ಟೈಲ್ಸ್​​ ಪಾರ್ಕ್​ ನಿರ್ಮಾಣ ಮಾಡುವುದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ, ಮಾಜಿ ಸಚಿವ ಜನಾರ್ದನರೆಡ್ಡಿ ಹೇಳಿದರು.

ಬಳ್ಳಾರಿ ನಗರದಲ್ಲಿ ಪತ್ನಿ ಲಕ್ಷ್ಮೀ ಅರುಣಾ ಅಭ್ಯರ್ಥಿ : ಕಲ್ಯಾಣ ಕರ್ನಾಟಕ ಪಕ್ಷದ ಪ್ರಣಾಳಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ರಾಜ್ಯದ ಎಲ್ಲಾ ಭಾಗಗಳ, ಎಲ್ಲಾ ಸಮುದಾಯಗಳ ಮತ್ತು ಎಲ್ಲಾ ವರ್ಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆ ರಚಿಸಲಾಗಿದೆ. ನನಗೆ ಅಧಿಕಾರ ಸಿಕ್ಕರೆ ನಾನು ನೀಡಿದ ಪ್ರಣಾಳಿಕೆಯಲ್ಲಿನ ಪ್ರತಿಯೊಂದು ಅಂಶವನ್ನು ಈಡೇರಿಸುವುದಾಗಿ ಲಿಖಿತ ಪೂರ್ವಕ ಬರೆದುಕೊಡುತ್ತೇನೆ. ಜನ ಅಭಿವೃದ್ಧಿಯ ವಿಚಾರದಲ್ಲಿ ಏನನ್ನು ನಿರೀಕ್ಷೆ ಮಾಡುತ್ತಿದ್ದಾರೋ ಅದನ್ನು ಮೀರಿ ನಾನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಈಗಾಗಲೇ ಗಂಗಾವತಿಯಿಂದ ನಾನು ಕಣಕ್ಕಿಳಿಯುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದಿಂದ ನನ್ನ ಪತ್ನಿ ಲಕ್ಷ್ಮಿಅರುಣಾ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ರೆಡ್ಡಿ ಅಧಿಕೃತವಾಗಿ ಹೇಳಿದರು.

ನಾನು ಯಾರಿಗೂ ಜಗ್ಗುವವನಲ್ಲ : ನನ್ನ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನನ್ನನ್ನು ಹೆದರಿಸಲು ಯತ್ನಿಸಿದರು. ಕೇಂದ್ರದವರು ಪಕ್ಷ ಸೇರುವಂತೆ ಒತ್ತಡ ಹೇರಿದರು. ಆದರೆ ಅಂದು ನನ್ನ ಆಸ್ತಿ ಅಂತಸ್ತು ಎಲ್ಲವನ್ನು ಕಳೆದುಕೊಂಡಿದ್ದರೂ ನಾನು ಯಾರಿಗೂ ಹೆದರಿಲ್ಲ. ಬೆದರಿಲ್ಲ. ಗಂಡು ಮೆಟ್ಟಿದ ಮಣ್ಣಿನಲ್ಲಿ ಹುಟ್ಟಿದವನು ನಾನು. ಯಾರಿಗೂ ಹೆದರಲಾರೆ. ನಾನು ಹಿಡಿದು ಕೆಲಸ ಮಾಡದೇ ಬಿಡುವ ಗಂಡಲ್ಲ. ಪ್ರಾಣ ಹೋದರೂ ಸರಿ ಕೊಟ್ಟ ಮಾತಿಗೆ ತಪ್ಪುವವನು ನಾನಲ್ಲ. ಹೀಗಾಗಿ ತನ್ನ ಬಗ್ಗೆ ಹಲವರು ಹರಡುತ್ತಿರುವ ವದಂತಿಗಳಿಗೆ ಕ್ಷೇತ್ರದ ಮತದಾರರು ಕಿವಿಗೊಡದಂತೆ ರೆಡ್ಡಿ ಮನವಿ ಮಾಡಿದರು.

ಗಂಗಾವತಿಯ ಸಮಗ್ರ ಅಭಿವೃದ್ಧಿ : ಗಂಗಾವತಿಯಲ್ಲಿ ಸುಸಜ್ಜಿತ 200 ಬೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಗಂಗಾವತಿಗೆ ಬೈಪಾಸ್ ರಸ್ತೆ, ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿ, ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಒಂದು ಜನ ಸಂಪರ್ಕ ಕೇಂದ್ರ ಸ್ಥಾಪಿಸುತ್ತೇನೆ. ಜನ ನನ್ನ ಬಳಿಗೆ ಅಲೆದಾಡುವ ಅಗತ್ಯವಿಲ್ಲ, ನಾನೇ ಜನರ ಬಳಿಗೆ ಬರುತ್ತೇನೆ ಎಂದು ರೆಡ್ಡಿ ವಾಗ್ದಾನ ಮಾಡಿದರು. ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂಬುಲೆನ್ಸ್​​ ಇಲ್ಲದೇ ಇಬ್ಬರು ಸಾವನ್ನಪ್ಪಿರುವ ಘಟನೆ ನನಗೆ ತೀವ್ರ ತಂದಿದೆ. ನನ್ನ ಸ್ವಂತ ಹಣದಲ್ಲಿ ಅಂಬುಲೆನ್ಸ್ ಕೊಡುತ್ತೇನೆ ಎಂದು ರೆಡ್ಡಿ ಇದೇ ವೇಳೆ ಹೇಳಿದರು.

ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ಸು ಕಂಡಿಲ್ಲವೇ : ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿಲ್ಲ. ರೆಡ್ಡಿ ಸ್ವಂತ ಪಕ್ಷ ಕಟ್ಟಿಕೊಂಡು ಏನು ಮಾಡುತ್ತಾರೆ ಎಂದು ಬಹಳಷ್ಟು ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಮಾತನಾಡಿಕೊಳ್ಳಲಿ. ರಾಜ್ಯ ರಾಜಕೀಯದ ಹಿಂದಿನ ಸ್ಥಿತಿ ಹಾಗೂ ಈಗಿನ ಸ್ಥಿತಿಗೆ ಬಹಳ ಭಿನ್ನವಾಗಿದೆ ಎಂಬುದು ಅವರ ಅರಿವಿಗೆ ಬಂದಂತೆ ಕಾಣುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಆಂಧ್ರದಲ್ಲಿ ವೈಎಸ್ಆರ್ ಕಾಂಗ್ರೆಸ್, ತೆಲಂಗಾಣದಲ್ಲಿ ಟಿಆರ್​ಎಸ್, ತಮಿಳುನಾಡಿನಲ್ಲಿ ಡಿಎಂಕೆ, ಅಣ್ಣಾ ಡಿಎಂಕೆ ಪಕ್ಷಗಳು ಪ್ರಾದೇಶಿಕವಾಗಿ ಯಶಸ್ವು ಕಂಡಿಲ್ಲವೇ. ಆ ಸನ್ನಿವೇಶ ಕರ್ನಾಟಕದಲ್ಲಿ ಏಕೆ ಮರುಕಳಿಸಬಾರದು ಎಂದು ರೆಡ್ಡಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಪತ್ನಿ ಲಕ್ಷ್ಮಿಅರುಣಾ, ಪುತ್ರಿ ಬ್ರಹ್ಮಿಣಿ ಉಪಸ್ಥಿತರಿದ್ದರು.

ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಜನಾರ್ದನ ರೆಡ್ಡಿ ಅವರು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತಮ್ಮ ಪತ್ನಿ ಲಕ್ಷ್ಮೀ ಅರುಣಾ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಿದ ಹಿನ್ನೆಲೆ, ಪಕ್ಷದ ಜಿಲ್ಲಾಧ್ಯಕ್ಷ ಗೋನಾಳ್ ರಾಜಶೇಖರಗೌಡ ಅವರ ನೇತೃತ್ವದಲ್ಲಿ ಬಳ್ಳಾರಿ ನಗರದ ಪ್ರಮುಖ ವೃತ್ತಗಳಲ್ಲಿ ಸಂಭ್ರಮಾಚರಣೆ ನಡೆಸಿದರು. ನಗರದ ಎಸ್ ಪಿ ಸರ್ಕಲ್, ದುರ್ಗಮ್ಮ ದೇವಸ್ಥಾನ ರಾಯಲ್ ವೃತ್ತ ಮೋತಿ ಸರ್ಕಲ್, ಸುಧಾ ಸರ್ಕಲ್ ಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಇದನ್ನೂ ಓದಿ : ಸಿಡಿ ಬಾಂಬ್ ಸಿಡಿಸಿದ್ದ ಜಾರಕಿಹೊಳಿ.. ಸಿಎಂ‌ ಜೊತೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ

Last Updated : Jan 31, 2023, 7:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.