ETV Bharat / state

ಸಮತೋಲನ ಜಲಾಶಯ ವೀಕ್ಷಣೆ: ನಾಳೆ ಗಂಗಾವತಿಗೆ ಸಚಿವ ಜಾರಕಿಹೊಳಿ

author img

By

Published : Mar 13, 2020, 12:26 PM IST

ನವಲಿ ಬಳಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಜಲಾಶಯದ ಸ್ಥಳದ ವೀಕ್ಷಣೆಗೆ ಶನಿವಾರ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಆಗಮಿಸಲಿದ್ದಾರೆ ಎಂದು ಶಾಸಕ ಬಸವರಾಜ ದಡೇಸುಗೂರು ತಿಳಿಸಿದ್ದಾರೆ.

Water Resources Minister Ramesh Jarkiholi
ಸಂಗ್ರಹ ಚಿತ್ರ

ಗಂಗಾವತಿ: ಕನಕಗಿರಿ ತಾಲೂಕಿನ ನವಲಿ ಬಳಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಜಲಾಶಯದ ಸ್ಥಳದ ವೀಕ್ಷಣೆಗೆ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಶನಿವಾರ ತಾಲೂಕಿಗೆ ಭೇಟಿ ನೀಡಲಿದ್ದಾರೆ.

ಶುಕ್ರವಾರ ಸಂಜೆ ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಹೊರಟು, ರಾತ್ರಿ ಹೊಸಪೇಟೆಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಶನಿವಾರ ಬೆಳಗ್ಗೆ ಮುನಿರಾಬಾದಿನಲ್ಲಿ ನೀರಾವರಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಿದ್ದಾರೆ. ಮಧ್ಯಾಹ್ನ 12.20ಕ್ಕೆ ಕನಕಗಿರಿಯ ಕನಕಾಚಲ ದೇಗುಲಕ್ಕೆ ಭೇಟಿ ನೀಡಿ ಬಳಿಕ ಉದ್ದೇಶಿತ ಸಮತೋಲನ ಜಲಾಶಯ ನಿರ್ಮಾಣ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗುರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.