ಗಂಗಾವತಿ : ಬಿರು ಬೇಸಿಗೆ ಆರಂಭವಾದ ಬಳಿಕ ಕುಡಿಯುವ ನೀರಿನ ಅಭಾವವಾಗುತ್ತಿದೆ. ಇದರಿಂದ ಪಕ್ಷಿಗಳಿಗೆ ತೊಂದರೆಯಾಗದಂತೆ ಲಯನ್ಸ್ ಕ್ಲಬ್ ಆವರಣದಲ್ಲಿ ವಾಯು ವಿಹಾರಕ್ಕೆ ತೆರಳುವ ಯುವಕರು ಬಟ್ಟಲುಗಳಲ್ಲಿ ನೀರು ಮತ್ತು ಆಹಾರ ಧಾನ್ಯಗಳನ್ನು ಇಟ್ಟು ಮಾನವೀಯತೆ ಮೆರೆದಿದ್ದಾರೆ.
ದಾರದ ಸಹಾಯದಿಂದ ಮರ-ಗಿಡಗಳಿಗೆ ಬಟ್ಟಲುಗಳನ್ನು ನೇತು ಹಾಕಿ ಪಕ್ಷಿಗಳ ನೀರಿನ ದಾಹ ತೀರಿಸುವ ಕೆಸಲಕ್ಕೆ ಮುಂದಾಗಿದ್ದಾರೆ. ಯುವಕರ ಕಾರ್ಯಕ್ಕೆ ಹಿರಿಯ ವೈದ್ಯರಾದ ಡಾ. ಸೋಮರಾಜು, ಡಾ. ಜಿ. ಚಂದ್ರಪ್ಪ ಕೈಜೋಡಿಸಿದ್ದಾರೆ. ಲಯನ್ಸ್ ಕ್ಲಬ್ ಆವರಣದಲ್ಲಿ ನೂರಾರು ಗಿಡಮರಗಳಿಗೆ ನೀರು ಹಾಗೂ ಆಹಾರದ ಬಟ್ಟಲುಗಳನ್ನು ಕಟ್ಟಲಾಗಿದೆ.