ಕೊಪ್ಪಳ : ಗಂಗಾವತಿ ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿ ತಟದ ನವವೃಂದಾನಗಡ್ಡೆಯಲ್ಲಿರುವ ವ್ಯಾಸರಾಜ ತೀರ್ಥರ ಆರಾಧನೆಗೆ ಇಂದು ವ್ಯಾಸರಾಜ ಮಠಾಧೀಶ ವಿದ್ಯಾಶ್ರೀಶ ತೀರ್ಥರು ಉತ್ತರ ಆರಾಧನೆ ನೆರವೇರಿಸುವ ಮೂಲಕ ತೆರೆ ಎಳೆದಿದ್ದಾರೆ.
ಬುಧುವಾರ ಪೂರ್ವಾರಾಧನೆ ಮೂಲಕ ಆರಂಭವಾದ ವ್ಯಾಸರಾಜ ತೀರ್ಥರ ಆರಾಧನಾ ಮಹೋತ್ಸವ ಆರಂಭವಾಯಿತು. ಪೂರ್ವಾರಾಧನೆ ಮತ್ತು ಮಧ್ಯಾರಾಧನೆ ಯನ್ನು ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ನೆರವೇರಿಸಿದರು.
ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ರಾಜ್ಯದ ನಾನಾ ಭಾಗದಿಂದ ಬಂದಿದ್ದ ಭಕ್ತರು ಆರಾಧನೆಯಲ್ಲಿ ಪಾಲ್ಗೊಂಡು ವ್ಯಾಸರಾಯರ ಕೃಪೆಗೆ ಪಾತ್ರರಾದರು.