ಗಂಗಾವತಿ : ಡಿಎನ್ ಬಿ ತರಬೇತಿಗೆ ವಿದ್ಯಾರ್ಥಿಗಳನ್ನು ನಿಯೋಜಿಸುವ ಉದ್ದೇಶದಿಂದ ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ವೀರೇಂದ್ರ ಕುಮಾರ್ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಎಂಬಿಬಿಎಸ್ ಪದವಿ ಬಳಿಕ ಮಹಿಳಾ ವಿಭಾಗದಲ್ಲಿನ ಸ್ತ್ರೀರೋಗ ಮತ್ತು ಪ್ರಸೂತಿ ಆರೈಕೆಯಲ್ಲಿನ ಪ್ರಾಯೋಗಿಕ ತರಬೇತಿ ನೀಡುವ ಉದ್ದೇಶಕ್ಕೆ ಪ್ರತಿವರ್ಷ ಇಲ್ಲಿನ ಉಪ ವಿಭಾಗ ಆಸ್ಪತ್ರೆಗೆ ಇಬ್ಬರು ಪ್ರಶಿಕ್ಷಣ ವಿದ್ಯಾರ್ಥಿ ವೈದ್ಯರನ್ನು ನಿಯೋಜಿಸುವುದಕ್ಕೆ ಸಂಬಂಧಿಸಿದಂತೆ ಇಲ್ಲಿನ ವೈದ್ಯರೊಂದಿಗೆ ಪ್ರಾಧ್ಯಾಪಕ ವೀರೇಂದ್ರ ಕುಮಾರ್ ಚರ್ಚಿಸಿದರು.
ಈ ವೇಳೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಈಶ್ವರ ಸವುಡಿ, ಆಸ್ಪತ್ರೆಯಲ್ಲಿನ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಲ್ಲಿನ ಪ್ರಗತಿ ಮಾಹಿತಿ ನೀಡಿದರು.
ವಿಭಾಗದ ವೈದ್ಯ ಸಿಬ್ಬಂದಿ ಪ್ರಭಾರಾಯ್ಕರ್, ಶ್ವೇತಾ ಹೊಸಳ್ಳಿ, ಅರಾಧ್ಯ, ದಿವ್ಯಾ ಇದ್ದರು.