ಕುಷ್ಟಗಿ (ಕೊಪ್ಪಳ): ಮಹಾತ್ಮಾ ಗಾಂಧಿ ನರೇಗಾ ಯೋಜನೆಯಲ್ಲಿ ಯಶಸ್ವಿ ಕಾರ್ಯ ನಿರ್ವಹಣೆ ಮಾಡಿದ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನ ತಳವಗೇರಾ ಗ್ರಾ.ಪಂ ಪಿಡಿಒ ಶರಣಮ್ಮ ಕುರ್ನಾಳ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಗರಿಷ್ಠ ಮಾನವ ದಿನಗಳ ಕೆಲಸ ನಿರ್ವಹಣೆಯಾದ ಕಾರಣ ಈ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಒಟ್ಟು 4,500 ಕೂಲಿಕಾರರಿಗೆ ಕೆಲಸ ಸಿಕ್ಕಿದೆ. 1,69,460 ದಿನಗಳ ಕೆಲಸಗಳಲ್ಲಿ 81,559 ಕೆಲಸವಾಗಿದ್ದು, ಒಟ್ಟು 5.92 ಕೋಟಿ ರೂ. ಅನುದಾನ ಖರ್ಚಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಈ ಕೆಲಸದಲ್ಲಿ 81,559 ಮಹಿಳಾ ಕೂಲಿಕಾರರು ಕೆಲಸ ಮಾಡಿದ್ದಾರೆ.
ರಾಜ್ಯದ 10 ಕಂಪ್ಯೂಟರ್ ಆಪರೇಟರ್ಗಳಲ್ಲಿ ಶಿರಗುಂಪಿಯ ಬಾಲಪ್ಪ ಗುಮಗೇರಿ ರಾಜ್ಯಮಟ್ಟದ ಅತ್ಯುತ್ತಮ ಡೇಟಾ ಎಂಟ್ರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಿರಗುಂಪಿ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಸೇರಿದಂತೆ ಇತರೆ ಯೋಜನೆಗಳಲ್ಲಿ ಆನ್ಲೈನ್ನಲ್ಲಿ ನಿಖರ ಮಾಹಿತಿ, ಸಕಾಲಿಕ ನಿರ್ವಹಣೆಯಾಗಿದ್ದು ಬಾಲಪ್ಪ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.
ಇದನ್ನೂ ಓದಿ: ಸಾರಿಗೆ ಮುಷ್ಕರ ಹತ್ತಿಕ್ಕಲು ಸರ್ಕಾರದಿಂದ ಮತ್ತೊಂದು ಅಸ್ತ್ರ ಪ್ರಯೋಗ
ಪ್ರಶಸ್ತಿ ಪ್ರದಾನ ಸಮಾರಂಭ ಹುಬ್ಬಳ್ಳಿಯ ಡೆನಿಸನ್ ಹೋಟೆಲ್ನಲ್ಲಿ ಏ.9 ರಂದು ನಡೆಯಲಿದೆ. ಇಬ್ಬರು ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಬಗ್ಗೆ ತಾ.ಪಂ ಇಒ ಕೆ.ತಿಮ್ಮಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.