ಕೊಪ್ಪಳ : ಜಿಲ್ಲೆಯ ಮುನಿರಾಬಾದ್ ತಾಲೂಕಿನಲ್ಲಿರುವ ತುಂಗಭದ್ರಾ ಡ್ಯಾಂ ಭರ್ತಿಯಾಗಿದ್ದು, ವಿದ್ಯುತ್ ದೀಪಗಳ ಅಂಲಕಾರದಿಂದ ಜಲಾಶಯ ಕಂಗೊಳಿಸುತ್ತಿದೆ.
ಜಲಾಶಯ ತುಂಬಿರುವ ಹಿನ್ನೆಲೆ 33 ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗುತ್ತಿದೆ. ಧುಮ್ಮಿಕ್ಕಿ ಹರಿಯುವ ಜಲಧಾರೆಗೆ ಬಣ್ಣ ಬಣ್ಣದ ದೀಪಾಲಂಕಾರ ಮತ್ತಷ್ಟು ಮೆರುಗು ನೀಡಿದೆ.
ಸಂಜೆ ವೇಳೆಗೆ ಡ್ಯಾಂನತ್ತ ಆಗಮಿಸುವ ನೂರಾರು ಜನ ತುಂಗಭದ್ರೆಯ ಚೆಲುವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.