ಗಂಗಾವತಿ: ನರೇಗಾ ಯೋಜನೆಯಲ್ಲಿ ಸರಿಯಾಗಿ ಉದ್ಯೋಗ ನೀಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಂಟೆ ತಕರಾರುಗಳು ಆಗುತ್ತವೆ. ಊರಿಗೆ ರಸ್ತೆ ಇಲ್ಲದಂತಹ ಸ್ಥಳದಲ್ಲಿ ವಾಸವಾಗಿದ್ದ ಜನರನ್ನು ಹುಡುಕಿಕೊಂಡು ಹೋಗಿ ತಾಲ್ಲೂಕು ಪಂಚಾಯಿತಿ ಇಒ ಮೋಹನ್ ಅವರು ಕೆಲಸಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ತಾಲೂಕಿನ ಹಂಪಸದುರ್ಗ ಗ್ರಾಮದಿಂದ 3 ಕಿ.ಮೀ. ಕಡಿದಾದ ಮಾರ್ಗದಿಂದ ಕೂಡಿರುವ ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯ 20 ಕುಟುಂಬಗಳಿಗೆ ಕಾಲ್ನಡಿಗೆಯಲ್ಲಿಯೇ ಮೋಹನ್ ಅವರು ತೆರಳಿದರು. ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವಂತೆ ಅಲ್ಲಿನ ಜನರಿಗೆ ತಿಳಿಸಿದ್ದಾರೆ.
ಸರ್ಕಾರದಿಂದ ಕೃಷಿ ಭೂಮಿ ಮಂಜೂರಾಗಿದೆ. ಅಲ್ಲದೇ ನರೇಗಾ ಯೋಜನೆಯ ಉದ್ಯೋಗ ಖಾತ್ರಿಯಲ್ಲಿ ಬದು ನಿರ್ಮಾಣಕ್ಕೆ ಅವಕಾಶವಿದೆ. ಯೋಜನೆಯನ್ನು ಸದುಪಯೋಗ ಪಡಿಸಿಕೊಸಿಕೊಳ್ಳಿ ಎಂದು ಜನರಿಗೆ ತಿಳಿ ಹೇಳಿದರು.