ETV Bharat / state

ಮೇ ತಿಂಗಳಿನಲ್ಲಿ ಹಿಂದೆಂದೂ ಆಗದ ಮಳೆ ಈ ಬಾರಿ ಆಗಿದೆ : ಸಚಿವ ಹಾಲಪ್ಪ ಆಚಾರ್ - This year rain is the highest ever in May saysMinister Halappa Achar

ಆದ್ಯತೆಯ ಮೇರೆಗೆ ನನ್ನ ಅವಧಿಯಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಅನೇಕ ರಸ್ತೆಗಳ ಅಭಿವೃದ್ಧಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಮೇ ತಿಂಗಳಿನಲ್ಲಿ ಹಿಂದೆಂದೂ ಆಗದ ಮಳೆ ಈ ಬಾರಿ ಆಗಿದೆ. ಕೆರೆ,ಕಟ್ಟೆಗಳು ತುಂಬಿಕೊಂಡಿವೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು..

Statement by Minister Halappa Achar at Yalaburga
ಸಚಿವ ಹಾಲಪ್ಪ ಆಚಾರ್
author img

By

Published : May 22, 2022, 5:31 PM IST

ಕೊಪ್ಪಳ : ಮೇ ತಿಂಗಳಿನಲ್ಲಿ ಹಿಂದೆಂದೂ ಆಗದ ಮಳೆ ಈ ಬಾರಿ ಆಗಿದೆ. ಕೆರೆ,ಕಟ್ಟೆಗಳು ತುಂಬಿವೆ. ಮಳೆಯಿಂದ ಒಂದಿಷ್ಟು ಸಮಸ್ಯೆಯಾಗಿದೆ. ಮುಂದಾಲೋಚನೆಯಿಂದ ಯೋಜನೆಗಳು, ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು.

ಯಲಬುರ್ಗಾದಲ್ಲಿರುವ ಸಿದ್ದರಾಮೇಶ್ವರ ಕಾಲೋನಿಗೆ ನೀರು ನುಗ್ಗಿತ್ತು. ಆದ್ಯತೆಯ ಮೇರೆಗೆ ನನ್ನ ಅವಧಿಯಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಅನೇಕ ರಸ್ತೆಗಳ ಅಭಿವೃದ್ಧಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಅನೇಕ ಕೆರೆಗಳ ಅಭಿವೃದ್ಧಿ ಮಾಡಲಾಗಿದೆ ಎಂದು ಯಲಬುರ್ಗಾದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.

ಶಿವರಾಜ ತಂಗಡಗಿ ಸಣ್ಣ ನೀರಾವರಿ ಮಂತ್ರಿಯಾಗಿದ್ದಾಗ, ನಮ್ಮ ಕ್ಷೇತ್ರದ ಕೆರೆಗಳ ಕಳಪೆ ಕಾಮಗಾರಿ ಮಾಡಿದ್ದರಿಂದ ಕಿತ್ತು ಹೋಗಿವೆ. ಕೊಪ್ಪಳ ತಾಲೂಕಿನ ಮುದ್ಲಾಪುರ ಬಳಿ ಇರುವ ಹಿರೇಹಳ್ಳ ಜಲಾಶಯ ಮಳೆಗೆ ಒಂದೇ ದಿನ ಭರ್ತಿಯಾಯಿತು.

ಜಲಾಶಯದ ಹಿನ್ನೀರ ಪ್ರದೇಶದ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ತೊಂದರೆಯಾಗದಂತೆ ಜಲಾಶಯದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೆ. ನಿನ್ನೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವನಾಗಿ ಮಳೆಯಿಂದ ಸಂಕಷ್ಟಕ್ಕೊಳಗಾದ ಜನರನ್ನು ಭೇಟಿ ಮಾಡಿದ್ದೇನೆ ಎಂದರು.

ಇದನ್ನೂ ಓದಿ: ನಾನು ಸಚಿವ ಸ್ಥಾನದ ಆಕಾಂಕ್ಷಿ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ- ಜಗದೀಶ್ ಶೆಟ್ಟರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.