ETV Bharat / state

ಈ ಬಾರಿಯೂ ಬಿಜೆಪಿ ಅಧಿಕಾರಾವಧಿಯಲ್ಲಿ‌ ಮೂವರು ಸಿಎಂ : ಶಾಸಕ ಬಯ್ಯಾಪೂರ ಭವಿಷ್ಯ - ಒಂದೇ ಅವಧಿಯಲ್ಲಿ ಮೂವರು ಮುಖ್ಯಮಂತ್ರಿ

ರಾಜೀನಾಮೆ ವಿಚಾರ ಬಿಜೆಪಿ ಪಕ್ಷದ ಆಂತರಿಕ ವಿಚಾರವಾಗಿದ್ದರೂ ಕೂಡ, ಬಿಜೆಪಿಗೆ ಮುಂದಿನ ದಿನಮಾನಗಳಲ್ಲಿ ಬಹಳಷ್ಟು ನಷ್ಟ ಆಗಲಿದೆ. ಬಲಾಢ್ಯ ಸಮುದಾಯದ ಮುಖಂಡರಾಗಿ, ಬಿಜೆಪಿ ಪಕ್ಷ ಮುನ್ನೆಡೆಸಿದ ವ್ಯಕ್ತಿಗೆ ಈ ರೀತಿಯಾಗಿರುವುದು ಆ ಪಕ್ಷದ ನಷ್ಟ. ಇದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್​​​ ಪಕ್ಷಕ್ಕೆ ಲಾಭವಾಗುವ ನಿರೀಕ್ಷೆಯಲ್ಲಿದ್ದೇವೆ..

this-time-also-three-cms-during-the-bjp-tenure
ಶಾಸಕ ಬಯ್ಯಾಪೂರ
author img

By

Published : Jul 26, 2021, 8:32 PM IST

ಕುಷ್ಟಗಿ : ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ ಒಂದೇ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾಗಿದ್ದರು. ಇದೀಗ ಬಿಎಸ್​ವೈ ರಾಜೀನಾಮೆ ನೀಡಿದ್ದು, ನಾಲ್ಕನೇಯ ವರ್ಷದ ಸಂದರ್ಭದಲ್ಲಿ ಎರಡನೇ ಸಿಎಂ, ಐದನೇ ವರ್ಷದಲ್ಲಿ ಮೂರನೇ ಸಿಎಂ ಬದಲಾದರೂ ಅಚ್ಚರಿ ಪಡುವ ಹಾಗಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಐದು ವರ್ಷಗಳನ್ನ ಸಂಪೂರ್ಣವಾಗಿ ಪೂರೈಸುತ್ತದೆಯೋ ಇಲ್ಲವೋ ಎಂಬುವುದು ಗೊತ್ತಿಲ್ಲ. ಇದು ಆ ಪಕ್ಷಕ್ಕೆ ಬಿಟ್ಟ ವಿಚಾರ. 'ನೋ ಬಿಎಸ್​ವೈ ನೋ ಬಿಜೆಪಿ ಇನ್ ಕರ್ನಾಟಕ' ಎಂದು ಈ ಹಿಂದೆ ತಾವೇ ಹೇಳಿದ್ದ ಹೇಳಿಕೆಯನ್ನು ಪುನರುಚ್ಚರಿಸಿದ ಶಾಸಕರು, ಪಕ್ಷ ಕಟ್ಟಿ ಬೆಳೆಸಿದ ವ್ಯಕ್ತಿಯನ್ನು ಮಧ್ಯದಲ್ಲಿ ಕೈಬಿಡುವುದು ಸರಿ ಅಲ್ಲ ಎಂದರು.

ಬಿಜೆಪಿ ಪಕ್ಷದ ಸ್ಥಿತಿ ಕುರಿತು ಶಾಸಕ ಬಯ್ಯಾಪೂರ ಪ್ರತಿಕ್ರಿಯೆ

ಬಿಎಸ್​ವೈ ರಾಜೀನಾಮೆ, ಕಾಂಗ್ರೆಸ್​ಗೆ ಲಾಭ : ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿರುವ ಹಿನ್ನೆಲೆ ಹೊಸ ಬೆಳವಣಿಗೆ ನಡೆದು ನಾಳೆಯೇ ಚುನಾವಣೆ ಬಂದರೂ ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಸುವ ವಿಶ್ವಾಸ ವಿದೆ ಎಂದು ಹೇಳಿದರು.

ರಾಜೀನಾಮೆ ವಿಚಾರ ಬಿಜೆಪಿ ಪಕ್ಷದ ಆಂತರಿಕ ವಿಚಾರವಾಗಿದ್ದರೂ ಕೂಡ, ಬಿಜೆಪಿಗೆ ಮುಂದಿನ ದಿನಮಾನಗಳಲ್ಲಿ ಬಹಳಷ್ಟು ನಷ್ಟ ಆಗಲಿದೆ. ಬಲಾಢ್ಯ ಸಮುದಾಯದ ಮುಖಂಡರಾಗಿ, ಬಿಜೆಪಿ ಪಕ್ಷ ಮುನ್ನೆಡೆಸಿದ ವ್ಯಕ್ತಿಗೆ ಈ ರೀತಿಯಾಗಿರುವುದು ಆ ಪಕ್ಷದ ನಷ್ಟ. ಇದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್​​​ ಪಕ್ಷಕ್ಕೆ ಲಾಭವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.