ಗಂಗಾವತಿ: ''ಕಾಂಗ್ರೆಸ್ ಪಕ್ಷ ಪ್ರಾಣಾಳಿಕೆಯಲ್ಲಿ ನೀಡಿದ ಐದು ಗ್ಯಾರಂಟಿ ಭರವಸೆಗಳ ಯೋಜನೆಗಳನ್ನು ಜಾರಿಗೆ ತರುವುದು ಹಾಗೂ ಈಡೇರಿಸುವುದು ಅಷ್ಟು ಸುಲಭವಲ್ಲ. ಸಾಕಷ್ಟು ಸಮಸ್ಯೆಗಳು ಮತ್ತು ಸವಾಲುಗಳಿವೆ'' ಎಂದು ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಹೇಳಿದರು.
ಮುಂದಕ್ಕೆ ಹೋಗುತ್ತಿದೆ ಗ್ಯಾರಂಟಿಗಳ ಅನುಷ್ಠಾನ: ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ಈ ಬಗ್ಗೆ ಜನರಿಗೆ ಭರವಸೆ ನೀಡಿದ್ದಾರೆ. ಆದರೆ, ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗ್ಯಾರಂಟಿಗಳ ಅನುಷ್ಠಾನ ಮುಂದಕ್ಕೆ ಹೋಗುತ್ತಲೇ ಇದೆ'' ಎಂದು ತಿಳಿಸಿದರು.
ಇದನ್ನೂ ಓದಿ: ಬಿಎಸ್ವೈ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ: ಗೇಟ್ವರೆಗೂ ಬಂದು ಸ್ವಾಗತ ಕೋರಿದ ಯಡಿಯೂರಪ್ಪ
''ನೀಡಿದ ಸಮಯ, ಗಡುವು ಮುಗಿಯುತ್ತಿದೆ. ಜೊತೆಗೆ ಗ್ಯಾರಂಟಿಗಳ ಜಾರಿಗೆ ಸಾಕಷ್ಟು ಸಮಸ್ಯೆಗಳು ಇವೆ. ಸರ್ಕಾರ ಅಸ್ತಿತ್ವಕ್ಕೆ ಬಂದ ಕ್ಷಣದಿಂದ ಯೋಜನೆಗಳು ಜಾರಿಯಾಗುತ್ತವೆ'' ಎಂದು ನಿರೀಕ್ಷಿಸಲಾಗಿತ್ತು. ಸಭೆಗಳ ಮೇಲೆ ಸಭೆಗಳನ್ನು ಮಾಡಿ ಗ್ಯಾರಂಟಿಗಳ ಜಾರಿಗೆ ಸರ್ಕಸ್ ಮಾಡುತ್ತಲೇ ಇದ್ದಾರೆ. ತಕ್ಷಣಕ್ಕೆ ಈ ಬಗ್ಗೆ ನಾವು ಪ್ರತಿಕ್ರಿಯೆ ನೀಡುವ ಬದಲು ಸಮಯ ನೀಡಿ, ಕಾದು ನೋಡಬೇಕು. ಆ ಬಳಿಕವಷ್ಟೇ ವಿಪಕ್ಷದವರು ಪ್ರತಿಕ್ರಿಯೆ ನೀಡಬೇಕಾಗುತ್ತದೆ'' ಎಂದರು.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಯೋಜನೆಗಳಿಗೆ ಅನುದಾನ ಕಡಿತ ಮಾಡಬೇಡಿ: ಸಿಎಂಗೆ ಮಾಜಿ ಸಿಎಂ ಪತ್ರ
ಆರ್ಥಿಕ ಶಿಸ್ತು ಕಾಪಾಡಬಲ್ಲರು: ''ನಾನು ಹತ್ತಿರದಿಂದ ನೋಡಿದಂತೆ ಸಿದ್ದರಾಮಯ್ಯ ಉತ್ತಮ ಹಣಕಾಸು ಮಂತ್ರಿಯಾಗಿ ಹಣಕಾಸು ಶಿಸ್ತು ಕಾಪಾಡಬಲ್ಲರು. ಈ ಹಿಂದೆ ಹಣಕಾಸು ಮಂತ್ರಿಯಾಗಿದ್ದಾಗ ಇಡೀ ದೇಶಕ್ಕೆ ಮಾದರಿಯಾಗಬಲ್ಲ ಬಜೆಟ್ ಮಂಡನೆ ಮಾಡಿ ಗಮನ ಸೆಳೆದಿದ್ದರು. ಸಿಎಂ ಆಗಿ ಈಗಲೂ ತಮ್ಮ ಬಳಿಯೇ ಹಣಕಾಸು ಖಾತೆ ಇರಿಸಿಕೊಂಡಿದ್ದರಿಂದ ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಸಮತೋಲನ ಕಾಪಾಡಿಕೊಳ್ಳಬಲ್ಲರು ಎಂಬ ವಿಶ್ವಾಸವಿದೆ. ಇದಕ್ಕೆ ಸಮಯ ನೀಡಬೇಕಾಗುತ್ತದೆ ಎಂದು ರೆಡ್ಡಿ ಹೇಳಿದರು.
ಇದನ್ನೂ ಓದಿ: ಎಣ್ಣೆ ಏಟಿನಲ್ಲಿ ಆಪರೇಷನ್ ಮಾಡಲು ಬಂದ ಡಾಕ್ಟರ್: ಆಕ್ರೋಶಗೊಂಡ ರೋಗಿಗಳು..!
ರಾಜ್ಯದಲ್ಲಿಯೇ ಅಕ್ಕಿ ಖರೀದಿಗೆ ಒತ್ತಾಯ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹೊರ ರಾಜ್ಯದ ಬದಲಿಗೆ ಸ್ಥಳೀಯವಾಗಿಯೇ ಖರೀದಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಜನಾರ್ದನ ರೆಡ್ಡಿ ಹೇಳಿದರು. ಇದರಿಂದ ಗಂಗಾವತಿ, ಸಿಂಧನೂರು, ಸಿರುಗುಪ್ಪಾ, ಮಾನ್ವಿಯಂತ ಭಾಗದ ನೂರಾರು ಭತ್ತ ಬೆಳೆಯುವವರಿಗೆ ಉಪಯೋಗವಾಗಲಿದೆ. ರೈತರಿಂದಲೇ ಭತ್ತ ಖರೀದಿಸುವುದರಿಂದ ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಅಲ್ಲದೇ ಅಕ್ಕಿಗಿರಿಣಿಯ ಕಾರ್ಮಿಕರು ಕೆಲಸ ಕೊಟ್ಟಂತಾಗುತ್ತದೆ. ಸ್ಥಳೀಯವಾಗಿ ಅಕ್ಕಿ ಖರೀದಿಸುವುದರಿಂದ ಸರ್ಕಾರಕ್ಕೆ ಲಾಭವಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಜುಲೈ 1ರ ವೇಳೆಗೆ ಐಫೋನ್ ತಯಾರಿಕಾ ಕಂಪನಿ ಫಾಕ್ಸ್ಕಾನ್ಗೆ ಪೂರ್ತಿ ಭೂಮಿ ಹಸ್ತಾಂತರ: ಸಚಿವ ಎಂಬಿ ಪಾಟೀಲ್
ಇದನ್ನೂ ಓದಿ: ಜನಾರ್ದನ ರೆಡ್ಡಿ ಹೇಳಿಕೆ ವಿರುದ್ಧ ಸೋಮಶೇಖರ ರೆಡ್ಡಿ ಆಕ್ರೋಶ