ETV Bharat / state

ಗೊತಗಿಯಲ್ಲಿ ನಿಗೂಢತೆಗೆ ಸಾಕ್ಷಿಯಾದ ಏಕಶಿಲಾ ಬಾವಿ

ನಾಗಕನ್ನಿಕೆ ದೇವಸ್ಥಾನ ಈ ಭಾಗದಲ್ಲಿ ಎಲ್ಲೂ ಇಲ್ಲ.‌ ಈ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಬೇಕಿದೆ. ಈ ಹಿಂದೆ ಪುರಾತತ್ವ ಇಲಾಖೆಯ ಕೆಲವರು ಬಂದು ಹೋದರು. ಆದರೆ, ಮುಂದೆ ಯಾವ ಕೆಲಸವೂ ಆಗಲಿಲ್ಲ. ಅತ್ಯಂತ ಮಹತ್ವವುಳ್ಳ ಈ ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಲು ಮುಂದಾಗಬೇಕು.

author img

By

Published : Sep 25, 2020, 7:18 PM IST

The importance of ancient temples
ಇತಿಹಾಸದ ಕಾಲಗರ್ಭದಲ್ಲಿ ಕಳೆದುಹೋಗುತ್ತಿರುವ ಪುರಾತನ ಕಾಲದ ದೇವಾಲಯಗಳು

ಕೊಪ್ಪಳ : ಈಗಲೂ ನಿಗೂಢತೆಯನ್ನೇ ಉಳಿಸಿಕೊಂಡು ಬಂದಿರುವ ಜಿಲ್ಲೆಯ ಕುಷ್ಟಗಿ ತಾಲೂಕಿನ ಗೊತಗಿ ಗ್ರಾಮದಲ್ಲಿರುವ ಕೆಲವು ಪುರಾತನ ಕಾಲದ ದೇವಾಲಯಗಳು ಸ್ಥಳೀಯರನ್ನು ಅಚ್ಚರಿಗೆ ತಳ್ಳಿವೆ. ನೆಲಮಟ್ಟದಲ್ಲಿರುವ ಪುರಾತನ ಕಾಲದ ದೇವಾಲಯವಾಗಿದ್ದರಿಂದ ಸಹಜವಾಗಿ ನೋಡಿದರೆ ಅಲ್ಲಿ ದೇವಸ್ಥಾನವಿದೆ ಎಂಬುದು ಸಹ ಗೊತ್ತಾಗುವುದಿಲ್ಲ. ಪಾಳು ಬಿದ್ದಿರುವ ಆ ದೇವಸ್ಥಾನಗಳ ಇತಿಹಾಸ ಇಲ್ಲಿದೆ.

ನಾಗಕನ್ನಿಕೆ, ದೇವಕನ್ನಿಕೆ ಹಾಗೂ ರಂಗನಾಥ ಎಂಬ ಮೂರು ಪುರಾತನ ಕಾಲದ ದೇವಾಲಯಗಳು ನೆಲಮಟ್ಟದಲ್ಲಿದ್ದು ಈ ದೇವಾಲಯಗಳ ಇತಿಹಾಸ ನೋಡಿದರೆ ಎಲ್ಲರಿಗೂ ಅಚ್ಚರಿಯಾಗುತ್ತೆ. ಸಹಜತೆಗೆ ಕಾಣದ ಈ ನೆಲಮಟ್ಟದ ದೇವಾಲಯಗಳನ್ನು ಸ್ವಲ್ಪ ಕಣ್ಣರಳಿಸಿಯೇ ನೋಡಬೇಕು. ಇತಿಹಾಸದ ಕಾಲಗರ್ಭದಲ್ಲಿ ಕಳೆದು ಹೋಗುತ್ತಿರುವ ಈ ಪುರಾತನ ಕಾಲದ ದೇವಾಲಯಗಳ ಬಗ್ಗೆ ಸ್ಥಳೀಯರು ಕಾರಣವನ್ನು ನೀಡುತ್ತಾರೆ.

The importance of ancient temples
ಸಂಗ್ರಹ ಚಿತ್ರ

ನಾಗಕನ್ನಿಕೆ, ದೇವಕನ್ನಿಕೆ ಹಾಗೂ ರಂಗನಾಥ ಈ ಮೂರು ದೇವಾಲಯಗಳು ನೆಲಮಟ್ಟದಲ್ಲಿವೆ. ನಾಗಕನ್ನಿಕೆಯ ದೇವಸ್ಥಾನದಲ್ಲಿ ಅಪರೂಪದ ನಾಗಕನ್ನಿಕೆ ಮೂರ್ತಿ ಇದೆ. ಅಲ್ಲದೇ ಈ ಮೂರು ದೇವಸ್ಥಾನಕ್ಕೆ ಸಂಬಂಧಿಸಿದ್ದು ಎನ್ನಲಾದ ಏಕಶಿಲಾ ಬಾವಿ ಇದೆ. ನಾಗಕನ್ನಿಕೆ ದೇವಸ್ಥಾನದಲ್ಲಿ ಹೊಯ್ಸಳರ ಕಾಲದ ಶಿಲಾ ಶಾಸನವಿದೆ. ಆದರೆ, ಪುರಾತನ ಹಾಗೂ ಐತಿಹಾಸಿಕ ದೇವಸ್ಥಾನಗಳು ಸಂರಕ್ಷಣೆ‌ ಇಲ್ಲದೇ ಪಾಳು ಬಿದ್ದಿವೆ. ಇನ್ನು ಈ ದೇವಸ್ಥಾನದ ಬಗ್ಗೆ ಹಿರಿಯರು ಅತ್ಯಂತ ರೋಚಕವಾದ ಮತ್ತು ಅಚ್ಚರಿಯ ವಿಷಯಗಳನ್ನು ಹೇಳುತ್ತಾರೆ. ಹೀಗಾಗಿ ಈ ದೇವಸ್ಥಾನಗಳು ಈಗಲೂ ನಿಗೂಢತೆಯನ್ನು ಉಳಿಸಿಕೊಂಡಿವೆ. ಈ ದೇವಸ್ಥಾನಗಳು ರಾಜಾಡಳಿತದ ಕಾಲದಲ್ಲಿ ಭಂಡಾರವಾಗಿತ್ತಂತೆ. ಹೀಗಾಗಿ, ಇಲ್ಲಿ ನಿಧಿ ಸಹ ಇದೆ ಎಂದು ಹೇಳುತ್ತಾರೆ. ಈ ಬಗ್ಗೆ ಅನೇಕರ ಗಮನಕ್ಕೆ ಬಂದಿದೆ. ಆದರೆ, ಅವರಾಡುವ ಮಾತು ಎಷ್ಟು ಸತ್ಯವೋ ಏನೋ, ನಿಗೂಢತೆ ಇರುವುದಂತು ನಿಜ ಎನ್ನುತ್ತಾರೆ ಸ್ಥಳೀಯರಾದ ರವೀಂದ್ರ ದೇಸಾಯಿ.

ಇನ್ನು ಈ ಪುರಾತನ ದೇವಸ್ಥಾನದ ಬಗ್ಗೆ ಅಧ್ಯಯನ ನಡೆಯಬೇಕಿದೆ. ಸಾಕಷ್ಟು ನಿಗೂಢತೆ, ಕುತೂಹಲ, ಅಚ್ಚರಿಗಳನ್ನು ಈ ದೇವಸ್ಥಾನ ತನ್ನ ಒಡಲೊಳಗೆ ಹುದುಗಿಸಿಕೊಂಡಿದೆ. ನಾಗಕನ್ನಿಕೆ ದೇವಸ್ಥಾನ ಈ ಭಾಗದಲ್ಲಿ ಎಲ್ಲೂ ಇಲ್ಲ.‌ ಈ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಬೇಕಿದೆ. ಈ ಹಿಂದೆ ಪುರಾತತ್ವ ಇಲಾಖೆಯ ಕೆಲವರು ಬಂದು ಹೋದರು. ಆದರೆ, ಮುಂದೆ ಯಾವ ಕೆಲಸವೂ ಆಗಲಿಲ್ಲ. ಅತ್ಯಂತ ಮಹತ್ವವುಳ್ಳ ಈ ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಲು ಮುಂದಾಗಬೇಕು ಎಂದು ಗ್ರಾಮಸ್ಥರ ಪರವಾಗಿ ಒತ್ತಾಯಿಸುತ್ತಾರೆ ಗುರಪ್ಪ ತಳವಾರ.

ಸಾಕಷ್ಟು ಕುತೂಹಲ ಮತ್ತು ನಿಗೂಢತೆಯನ್ನು ಹೊಂದಿರುವ ಈ ಪುರಾತನ ಕಾಲದ ದೇವಸ್ಥಾನಗಳ ಬಗ್ಗೆ ಅಧ್ಯಯನ ಹಾಗೂ ಪುನರುಜ್ಜೀವನಗೊಳಿಸುವ ಅಗತ್ಯವಿದೆ ಅನ್ನೋದು ನಮ್ಮ ಆಶಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.