ಕೊಪ್ಪಳ: ಮೋದಿ ಅಭಿಮಾನಿ ಹಾಗೂ ಚುನಾವಣಾಧಿಕಾರಿಗಳ ನಡುವೆ ವಾಗ್ವಾದ ನಡೆದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಲ್ಲಿ ನಾಗೇಶ್ವರ ರಾವ್ ಕಾಲೇಜು ಬಳಿ ನಡೆದಿದೆ.
ಭಗವಧ್ವಜದಲ್ಲಿ ಮೋದಿ ಭಾವಚಿತ್ರವಿರುವ ಧ್ವಜವನ್ನು ಮಧುಗಿರಿಯಿಂದ ಗಂಗಾವತಿವರೆಗೆ ಬೈಕ್ಗೆ ಕಟ್ಟಿಕೊಂಡು ಮೋದಿ ಅಭಿಮಾನಿ ಕಾರ್ಯಕ್ರಮಕ್ಕೆ ಬಂದಿದ್ದ. ಇದನ್ನು ನೋಡಿದ ಚುನಾವಣಾಧಿಕಾರಿಗಳು ಬೈಕ್ಗೆ ಕಟ್ಟಿದ್ದ ಧ್ವಜ ತಗೆದು ಹೋಗುವಂತೆ ಸೂಚಿಸಿದ್ದಾರೆ.
ಇದರಿಂದ ರೊಚ್ಚಿಗೆದ್ದ ಅಭಿಮಾನಿ ಇದು ತಪ್ಪು ಅನ್ನೋದಾದ್ರೆ ನನ್ನ ಮೇಲೆ ಕೇಸ್ ಹಾಕಿ. ಆದರೆ, ಅದಕ್ಕೂ ಮೊದಲು ರಾಜ್ಯದಲ್ಲಿ ಹಾಗೂ ದೇಶದ ಬೇರೆ ಬೇರೆ ಕಡೆ ಕಾಂಗ್ರೆಸ್ ಸಮಾವೇಶಗಳಲ್ಲಿ ಪಾಕಿಸ್ತಾನ ಧ್ವಜ ಹಾಕಿಕೊಂಡವರ ಬಗ್ಗೆ ಚುನಾವಣಾ ಆಯೋಗ ಏನು ಕ್ರಮ ಕೈಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸಿ ಎಂದು ಚುನಾವಣಾಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾನೆ. ಹಾಗೆ ಜಿಲ್ಲಾಧಿಕಾರಿ ಬರುವರೆಗೂ ನಾನು ಹೋಗೋದಿಲ್ಲ ಎಂದು ಮೋದಿ ಅಭಿಮಾನಿ ಇದೇ ಸಂದರ್ಭದಲ್ಲಿ ಪಟ್ಟು ಹಿಡಿದಿದ್ದ ಎನ್ನಲಾಗ್ತಿದೆ.