ಕುಷ್ಟಗಿ(ಕೊಪ್ಪಳ): ಕೋವಿಡ್ ಭೀತಿಯ ನಡುವೆಯೂ ಕುಷ್ಟಗಿಯಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಹಿನ್ನೆಲೆ ಮಸೀದಿಗೆ ತೆರಳಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಶನಿವಾರ ಬೆಳಗ್ಗೆ ನಿಗದಿತ ಸಮಯಕ್ಕೆ ಪಟ್ಟಣದ ಜಾಮೀಯಾ, ಮದೀನಾ, ಮಹಬೂಬಿಯಾ, ಫಿರದೌಸ್, ನುರಾನಿ, ಮಖಬೂಲಿಯಾ, ಹಿದಾಯತ್, ಅರಬ್ಬೀ ಮದರಸಗಳಲ್ಲಿ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು. ಮಸೀದಿಗಳಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಥರ್ಮಲ್ ಸ್ಕ್ರೀನಿಂಗ್ನಿಂದ ಪರೀಕ್ಷಿಸಿ, ಮಾಸ್ಕ್ ಧರಿಸಿದವರಿಗೆ, ಸ್ಯಾನಿಟೈಸರ್ ಹಾಕಿ ಕೈ ತೊಳೆದವರಿಗೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಯಿತು.
ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಪ್ರಾರ್ಥನೆ ಬಳಿಕ ಪರಸ್ಪರ ಮುಸಫಾ(ಹಸ್ತಲಾಘವ), ಗಲೆ ಮಿಲನ್ (ಆಲಿಂಗನಾ)ಕ್ಕೆ ಅವಕಾಶವಿರಲಿಲ್ಲ. ಕೋವಿಡ್ ಆತಂಕದಲ್ಲಿ ಬಕ್ರೀದ್ ಸಂಭ್ರಮಾಚರಣೆ ಕೇವಲ ಸಾಂಕೇತಿಕವೆನಿಸಿತು.