ETV Bharat / state

ಉಜ್ಜಯನಿ ಪೀಠದ ಕುರಿತು ಯಾವುದೇ ಗೊಂದಲ ಇಲ್ಲ: ಶ್ರೀಶೈಲ ಜಗದ್ಗುರು ಸ್ಪಷ್ಟನೆ - ಚನ್ನಬಸವ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ

ಉಜ್ಜಯನಿ ಪೀಠದ ಇತ್ತೀಚಿನ ಬೆಳವಣಿಗೆಯ ಕುರಿತಂತೆ ಶ್ರೀಶೈಲ ಜಗದ್ಗುರು ಡಾ. ಚನ್ನಬಸವ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಶ್ರೀಶೈಲ ಜಗದ್ಗುರು
Srisailala Jagadguru
author img

By

Published : Nov 25, 2020, 3:36 PM IST

ಕುಷ್ಟಗಿ(ಕೊಪ್ಜಳ) : ಉಜ್ಜಯಿನಿ ಪೀಠದ ಪೀಠಾಧೀಶ್ವರ ವಿಷಯದಲ್ಲಿ 9-10 ವರ್ಷಗಳ ಹಿಂದೆ ಕಾನೂನು ಬದ್ಧವಾದ ಧರ್ಮ ಪರಂಪರೆಗಳ ಅನ್ವಯ ಪಟ್ಟಾಧಿಕಾರ ನಡೆದಿದ್ದು, ಈಗಲೂ ಹಾಗೂ ಮುಂದೆಯೂ ಅದೇ ಪಟ್ಟಾಧಿಕಾರತ್ವ ಮುಂದುವರಿಲಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಬಸವ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಶ್ರೀಶೈಲ ಜಗದ್ಗುರು ಡಾ. ಚನ್ನಬಸವ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಉಜ್ಜಯಿನಿ ಪೀಠದ ಇತ್ತೀಚಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಾಶಿ ಜಗದ್ಗುರುಗಳು, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಜ್ಜಯಿನಿ ಪೀಠದ ಪಟ್ಟಾಧಿಕಾರವನ್ನು ಸಮಾಜವೇ ಒಪ್ಪಿದೆ. ಯಾವುದೇ ಆತಂಕ ಇಲ್ಲದೇ ಇಲ್ಲಿಯವರೆಗೂ ಮುನ್ನೆಡೆಸಿಕೊಂಡು ಬಂದಿದೆ. ಈಗಲೂ ಕೂಡ ಮುಂದೆಯೂ ಹಾಗೆಯೇ ಇರುತ್ತದೆ. ಯಾರು ಸಂಶಯಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು.

ಈ ವಿಷಯಕ್ಕೆ ಉಜ್ಜಯಿನಿ ಪೀಠದ ಭಕ್ತರು ಗೊಂದಲ್ಲಕ್ಕೀಡಾಗುವುದು ಅವಶ್ಯಕತೆ ಇಲ್ಲ. ಯಾವುದೋ ಘಳಿಗೆಯಲ್ಲಾದ ಬೆಳವಣಿಗೆ ನಿರಾಧಾರವಾಗಿದೆ. ಈ ಹಿನ್ನೆಲೆಯಲ್ಲಿ ಶಿವಾಚಾರ್ಯರು ಮತ್ತು ಭಕ್ತರು ನಡುವೆ ಸಂಧಾನ ಮಾಡುವ ಪ್ರಯತ್ನ ನಡೆಯುತ್ತಿದ್ದು, ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ವೀರಶೈವ ಲಿಂಗಾಯತ ಅಭಿವೃಧ್ಧಿ ನಿಗಮ ಆರಂಭಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಈ ಸಮುದಾಯದಲ್ಲಿ ಅಧಿಕ ಸಂಖ್ಯೆಯ ಜನರಿದ್ದಾರೆ ಹಾಗೂ ಆರ್ಥಿಕವಾಗಿ ಸಮಾಜದಲ್ಲಿ ಹಿಂದುಳಿದವರು ಸಾಕಷ್ಟು ಜನರಿದ್ದು, ಅವರನ್ನು ಮೇಲೆತ್ತುವ ಅಗತ್ಯವಿದೆ ಎಂದರು.

ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಉತ್ತಮ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹವಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಪರವಾಗಿ ಉತ್ತಮ ಸೇವೆ ಸಲ್ಲಿಸಿದ ಬೆಂಗಳೂರಿನ ಪರಮಶಿವಯ್ಯ ಅವರನ್ನು ಈ ನಿಗಮದ ಅಧ್ಯಕ್ಷರನ್ನಾಗಿ ಮಾಡಿದೆ. ಅಷ್ಟೇ ಅಲ್ಲದೆ ಈ ಸಮಾಜದಿಂದ ನಿಗಮಕ್ಕೆ ಅನಕೂಲವಾಗುವ ನಿಟ್ಟಿನಲ್ಲಿ ಸರ್ಕಾರ 500 ಕೋಟಿ ರೂ. ಬಿಡುಗಡೆ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಸಮಾಜಮುಖಿ ಕಾರ್ಯಗಳಿಗೆ ಹೆಚ್ಚು ಅನಕೂಲವಾಗುವ ನಿಟ್ಟಿನಯಲ್ಲಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಈ ವೇಳೆ ಕುಷ್ಟಗಿ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಚಳಗೇರಿಯ ಶ್ರೀ ವೀರಸಂಗಮೇಶ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.