ETV Bharat / state

ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಿಸಲು ಸಾರವರ್ಧಿತ ವಿಶೇಷ ಅಕ್ಕಿ ಪ್ರಯೋಗ: ಎಲ್ಲಿ, ಏನು? - ಕೊಪ್ಪಳದಲ್ಲಿ ಪ್ರಾಯೋಗಿಕ ಪರೀಕ್ಷೆ

ಸುಮಾರು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿದ ಸೆಂಟ್ ಜಾನ್ಸ್​​ ರಿಸರ್ಚ್ ಸೆಂಟರ್ ಹಾಗೂ ಕೇಂದ್ರ ಬಯೋಟೆಕ್ನಾಲಜಿ ವಿಭಾಗವು ಅಪೌಷ್ಠಿಕ ಮಕ್ಕಳಲ್ಲಿ ಆರೋಗ್ಯ ವರ್ಧನೆಗಾಗಿ ಈ ಪ್ರಯೋಗ ಆರಂಭಿಸಿದೆ. ಈ ಮೊದಲು ಅಪೌಷ್ಠಿಕ ಮಕ್ಕಳಿಗೆ ಮಾತ್ರ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಆದರೆ, ಈಗ ಅಪೌಷ್ಠಿಕ ಇರುವ ಇಡೀ ಕುಟುಂಬಕ್ಕೆ ಸಾರವರ್ಧಿತ ಅಕ್ಕಿ ನೀಡಲಾಗುತ್ತಿದೆ..

special-rice-to-koppal-children-special-story
ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಿಸಲು ಸಾರವರ್ಧಿತ ವಿಶೇಷ ಅಕ್ಕಿ ಪ್ರಯೋಗ: ಎಲ್ಲಿ, ಏನು?
author img

By

Published : Jul 20, 2021, 7:35 PM IST

ಕೊಪ್ಪಳ : ಮಕ್ಕಳಲ್ಲಿನ ಅಪೌಷ್ಠಿಕತೆ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗಾಗಿ, ಅಪೌಷ್ಠಿಕತೆ ಹೊಂದಿರುವ ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸಲು ನಾನಾ ರೀತಿಯ ಪ್ರಯತ್ನ ನಡೆದಿದೆ. ಅದರಲ್ಲೂ ಕೊರೊನಾ ಸೋಂಕಿನ 3ನೇ ಅಲೆ ಮಕ್ಕಳನ್ನು ಅದರಲ್ಲೂ ಅಪೌಷ್ಠಿಕತೆ ಹೊಂದಿರುವ ಚಿಣ್ಣರನ್ನ ಬಾಧಿಸಲಿದೆ ಎಂಬ ತಜ್ಞರ ವರದಿ ಆತಂಕ ಮೂಡಿಸಿದೆ.

ಹೀಗಾಗಿ, ದೇಶದಲ್ಲಿಯೇ ಮೊದಲು ಎಂಬಂತೆ ಕೊಪ್ಪಳ ಜಿಲ್ಲೆಯ ಕ್ಲಸ್ಟರ್‌ವೊಂದರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷವಾದ ಸಾರವರ್ಧಿತ ಅಕ್ಕಿಯನ್ನು ವಿತರಿಸಲಾಗಿದೆ. ಈ ಅಕ್ಕಿಯ ಆಹಾರ ತಿಂದ ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಾದರೆ ದೇಶಾದ್ಯಂತ ಮಕ್ಕಳಿಗೆ ಈ ಅಕ್ಕಿಯನ್ನು ವಿತರಿಸಲು ಚಿಂತನೆ ನಡೆದಿದೆ.

ಕೊಪ್ಪಳದಲ್ಲಿ ಸಾರವರ್ಧಿತ ವಿಶೇಷ ಅಕ್ಕಿ ಪ್ರಯೋಗ

ಕೊಪ್ಪಳದಲ್ಲಿ ಪ್ರಾಯೋಗಿಕ ಪರೀಕ್ಷೆ

ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಕ್ಲಸ್ಟರ್​​ನಲ್ಲಿ ಈ ಸಾರವರ್ಧಿತ ಅಕ್ಕಿಯನ್ನು ವಿತರಿಸಲಾಗಿದೆ. ಬೆಂಗಳೂರಿನ ಸೇಂಟ್ ಜಾನ್ಸ್​ ರಿಸರ್ಚ್ ಸೆಂಟರ್, ಕರ್ನಾಟಕ ಆರೋಗ್ಯ ವರ್ಧಿತ ಪ್ರತಿಷ್ಠಾನ (ಕೆಹೆಚ್‍ಪಿಟಿ) ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಈಗ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಜೈವಿಕ ಮತ್ತು ತಂತ್ರಜ್ಞಾನ ಮಂತ್ರಾಲಯದ ಸಹಕಾರದೊಂದಿಗೆ ವಿಶೇಷವಾದ ಅಕ್ಕಿಯನ್ನು ತಯಾರಿಸಿ ನೀಡಲಾಗುತ್ತಿದೆ.

ಸೋನಾ ಮಸೂರಿ ಅಕ್ಕಿಯೊಂದಿಗೆ ಶೇ.30ರಷ್ಟು ಪ್ರಮಾಣದಷ್ಟು ಈ ಸಾರವರ್ಧಿತ ಅಕ್ಕಿಯನ್ನು ಸೇರಿಸಿ ಕಬ್ಬಿಣಾಂಶ ಕಡಿಮೆ ಇರುವ ಮಕ್ಕಳ ಇಡೀ ಕುಟುಂಬಕ್ಕೆ ಎರಡು ವರ್ಷದವರೆಗೂ ಸಾರವರ್ಧಿತ ಈ ಅಕ್ಕಿಯನ್ನು ನೀಡಲಾಗುತ್ತದೆ. ಸಾರವರ್ಧಿತ ಈ ಅಕ್ಕಿ ಕಬ್ಬಿಣಾಂಶ, ಬಿ12, ಪೋಲಿಕ್ ಆಸಿಡ್​ ಅನ್ನು ಒಳಗೊಂಡಿದೆ.

ಸುಮಾರು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿದ ಸೆಂಟ್ ಜಾನ್ಸ್​​ ರಿಸರ್ಚ್ ಸೆಂಟರ್ ಹಾಗೂ ಕೇಂದ್ರ ಬಯೋಟೆಕ್ನಾಲಜಿ ವಿಭಾಗವು ಅಪೌಷ್ಠಿಕ ಮಕ್ಕಳಲ್ಲಿ ಆರೋಗ್ಯ ವರ್ಧನೆಗಾಗಿ ಈ ಪ್ರಯೋಗ ಆರಂಭಿಸಿದೆ. ಈ ಮೊದಲು ಅಪೌಷ್ಠಿಕ ಮಕ್ಕಳಿಗೆ ಮಾತ್ರ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಆದರೆ, ಈಗ ಅಪೌಷ್ಠಿಕ ಇರುವ ಇಡೀ ಕುಟುಂಬಕ್ಕೆ ಸಾರವರ್ಧಿತ ಅಕ್ಕಿ ನೀಡಲಾಗುತ್ತಿದೆ.

ಸಮೀಕ್ಷೆಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ಒಟ್ಟು 30269 ಅಪೌಷ್ಠಿಕ, 748 ತೀವ್ರ ಅಪೌಷ್ಠಿಕ ಮಕ್ಕಳಿದ್ದಾರೆ. ಸಾರವರ್ಧಿತ ಅಕ್ಕಿಯಿಂದ ಮಕ್ಕಳಲ್ಲಿನ ಅಪೌಷ್ಠಿಕತೆ ಕಡಿಮೆ ಮಾಡುವ ಪ್ರಾಯೋಗಿಕ ಕಾರ್ಯವನ್ನು ಬಹದ್ದೂರಬಂಡಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಶುರು ಮಾಡಲಾಗಿದೆ. ಈ ಕ್ಲಸ್ಟರ್ ವ್ಯಾಪ್ತಿಯಲ್ಲಿ ಒಟ್ಟು 9 ಸರ್ಕಾರಿ ಶಾಲೆಗಳು ಬರುತ್ತಿದ್ದು, 6 ರಿಂದ 14 ವರ್ಷ ವಯೋಮಾನದೊಳಗಿನ ಒಟ್ಟು 2384 ಮಕ್ಕಳಿದ್ದಾರೆ. ಈ ಪೈಕಿ 184 ಮಕ್ಕಳಲ್ಲಿ ಅಪೌಷ್ಠಿಕತೆ ಗುರುತಿಸಲಾಗಿದೆ.

ಮಕ್ಕಳಿಗೆ ನೀಡಿರುವ ಅಕ್ಕಿ ಉತ್ತಮವಾಗಿದ್ದು, ರುಚಿಯಾಗಿದೆ. ಈ ಅಕ್ಕಿಯ ಆಹಾರದಿಂದ ಮಕ್ಕಳಲ್ಲಿನ ಆರೋಗ್ಯ ಸುಧಾರಿಸಿದರೆ ಸಾಕು ಎನ್ನುತ್ತಾರೆ ಮಕ್ಕಳ ಪಾಲಕರು. ಸಾರವರ್ಧಿತ ಅಕ್ಕಿ ನೀಡಿದ ಕುಟುಂಬಗಳು ಇದೇ ಅಕ್ಕಿ ಬಳಸುತ್ತಿರುವ ಕುರಿತು ಹಾಗೂ ಅವರು ಮತ್ತೆ ಬೇರೆ ಯಾವ ಯಾವ ಪೌಷ್ಠಿಕ ಆಹಾರ ಸೇವನೆ ಮಾಡುತ್ತಾರೆ ಎಂಬುದರ ಬಗ್ಗೆಯೂ ಕೆಹೆಚ್‍ಪಿಟಿ ಕಾರ್ಯಕರ್ತರು ನಿತ್ಯ ಮನೆ ಮನೆಗೆ ಭೇಟಿ ನೀಡಿ ಪರಶೀಲನೆ ಮಾಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.