ETV Bharat / state

3 ವರ್ಷದಿಂದ ಹಾಳಾಗಿದ್ದ ಟ್ರಾಫಿಕ್ ಸಿಗ್ನಲ್ ಸರಿಪಡಿಸಿ ಖುದ್ದು ಟ್ರಾಫಿಕ್ ನಿಯಂತ್ರಿಸಿದ ಎಸ್​​ಪಿ - koppal traffic

ಮೂರು ವರ್ಷದಿಂದ ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸದೆ ಹಾಳಾಗಿದ್ದ ಸಿಗ್ನಲ್​ಗಳು ಹಾಗೂ ಸಿಸಿ ಟಿವಿಗಳು ಮತ್ತೆ ಕಾರ್ಯಾರಂಭ ಮಾಡಿವೆ..

SP Fixed traffic signal that has been spoiled from last 3 years
ಟ್ರಾಫಿಕ್ ಸಿಗ್ನಲ್ ಸರಿಪಡಿಸಿ ಖುದ್ದು ಟ್ರಾಫಿಕ್ ನಿಯಂತ್ರಿಸಿದ ಎಸ್​​ಪಿ
author img

By

Published : Nov 9, 2020, 1:30 PM IST

ಕೊಪ್ಪಳ: ಇಲ್ಲಿನ ಎಸ್​​​ಪಿ ಟಿ.ಶ್ರೀಧರ್ ಅವರು ನಗರದ ಬಸವೇಶ್ವರ ಸರ್ಕಲ್​​ನಲ್ಲಿ ರಸ್ತೆಗಿಳಿದು ಖುದ್ದು ಟ್ರಾಫಿಕ್ ನಿಯಂತ್ರಿಸಿದ್ದಾರೆ. ಬಸವೇಶ್ವರ ವೃತ್ತದಲ್ಲಿ ಕಳೆದ ಮೂರು ವರ್ಷಗಳಿಂದ ಕೆಟ್ಟುನಿಂತಿದ್ದ ಸಿಗ್ನಲ್ ಲೈಟ್​ಗಳ ದುರಸ್ಥಿ ಕಾರ್ಯ ಮಾಡಿಸಿದ ಅವರು, ಬಳಿಕ ಅಲ್ಲಿಯೇ ಕೆಲಹೊತ್ತು ಟ್ರಾಫಿಕ್ ನಿಯಂತ್ರಿಸಿದರು.

ನಗರದಲ್ಲಿ ಎಸ್​​​​ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಶ್ರೀಧರ್ ಕೆಲವೇ ದಿನಗಳಲ್ಲಿ ಟ್ರಾಫಿಕ್ ದೀಪಗಳ ದುರಸ್ಥಿಗೆ ಮುಂದಾಗಿದ್ದಾರೆ. ಮೂರು ವರ್ಷದಿಂದ ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸದೆ ಹಾಳಾಗಿದ್ದ ಸಿಗ್ನಲ್​ಗಳು ಹಾಗೂ ಸಿಸಿ ಟಿವಿಗಳು ಮತ್ತೆ ಕಾರ್ಯಾರಂಭ ಮಾಡಿವೆ.

ಟ್ರಾಫಿಕ್ ಸಿಗ್ನಲ್ ಸರಿಪಡಿಸಿ ಖುದ್ದು ಟ್ರಾಫಿಕ್ ನಿಯಂತ್ರಿಸಿದ ಎಸ್​​ಪಿ

ಈ ಮೂಲಕ ವಾಹನ ಸವಾರರಿಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂದೇಶ ರವಾನಿಸಿದ್ದಾರೆ. ಎಸ್​​ಪಿ ಟಿ. ಶ್ರೀಧರ್ ಅವರಿಗೆ ಡಿವೈಎಸ್​ಪಿ ವೆಂಕಟಪ್ಪ ನಾಯಕ, ನಗರ ಠಾಣೆಯ ಪಿಐ ಮಾರುತಿ ಗುಳ್ಳಾರಿ, ಮಹಿಳಾ ಠಾಣೆಯ ಪಿಐ ಮೌನೇಶ್ವರ್ ಮಾಲಿ ಪಾಟೀಲ್ ಹಾಗೂ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ವೆಂಕಟೇಶ್ ಅವರು ಸಾಥ್ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.