ಗಂಗಾವತಿ:ದೇಶದಲ್ಲಿ ಶೇ.80ರಷ್ಟು ಹಿಂದುಗಳಿದ್ದೇವೆ. ನಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವುದು ಇಲ್ಲಿ ಮುಖ್ಯ. ಸೋಮ ಶೇಖರ್ ರೆಡ್ಡಿ ಹೇಳಿದ್ದರಲ್ಲಿ ಏನು ತಪ್ಪಿದೆ ಎಂದು ಕನಕಗಿರಿ ಶಾಸಕ ಶಾಸಕ ಬಸವರಾಜ ದೆಡೇಸಗೂರು ಪ್ರಶ್ನಿಸಿದ್ದಾರೆ.
ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ನೀಡಿದ್ದ ಹೇಳಿಕೆಯಿಂದ ರಾಯಚೂರು, ಕೊಪ್ಪಳದಲ್ಲಿ ಪ್ರತಿಭಟನೆಗಳಾದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ದಡೇಸಗೂರು, ಬಳ್ಳಾರಿ ಶಾಸಕರು ನೀಡಿದ ಹೇಳಿಕೆಯಲ್ಲಿ ತಪ್ಪೇನಿದೆ. ನಾವು ನಮ್ಮ ದೇಶದಲ್ಲಿ ಇರುವ ಸಂಖ್ಯೆಯನ್ನು ಹೇಳಿದ್ದೇವೆ.
ಬೇರೆ ದೇಶದಲ್ಲಿ ಅಲ್ಲಿನವರು ಹೇಳುವುದಿಲ್ಲವೇ,ಇದರಲ್ಲಿ ತಪ್ಪೇನಿದೆ. ದೇಶದ ಬಗ್ಗೆ ಹಾಗೂ ಸ್ವಾಭಿಮಾನ ಇರೋರು ಹೇಳಿಕೆ ನೀಡಿದರೆ ತಪ್ಪೇನಿಲ್ಲ. ಶೇ.20ರಷ್ಟಿರುವ ಜನ ಪ್ರತಿಭಟನೆ, ಪಾದಯಾತ್ರೆ ಮಾಡುತ್ತಾರೆ. ಶೇ.80ರಷ್ಟು ಇರುವ ಜನ ಏನಾದರೂ ಮಲಗಿರುತ್ತಾರೆಯೇ ಎಂದು ಶಾಸಕ ಬಸವರಾಜ ದೆಡೇಸಗೂರು ಪ್ರಶ್ನಿಸಿದರು. ಆ ಮೂಲಕ ವಿವಾದದ ಕಿಡಿಗೆ ಮತ್ತಷ್ಟು ತುಪ್ಪ ಸುರಿಯುವ ಮಾತಾಡಿದ್ದಾರೆ.