ಕೊಪ್ಪಳ: ಲಂಚ ಪಡೆಯುತ್ತಿದ್ದ ಸಂದರ್ಭ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಕಚೇರಿಯ ಕ್ಲರ್ಕ್ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕೊಪ್ಪಳದ ಟಣಕನಕಲ್ ಗ್ರಾಮದ ಮಂಜುನಾಥ ಬೋವಿ ಎಂಬವರಿಗೆ, ಕ್ಲರ್ಕ್ ಜಮದಗ್ನಿ 'ಅಂತರ್ಜಾತಿ ವಿವಾಹ ಪ್ರೋತ್ಸಾಹ' ಯೋಜನೆಯ ಹಣದ ಚೆಕ್ ನೀಡಬೇಕಿತ್ತು. ಈ ಸಂದರ್ಭ ಅವರು 15,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ಸಂಬಂಧ ಮಂಜುನಾಥ ಬೋವಿ ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ. ಇವತ್ತು ಜಮದಗ್ನಿ 15,000 ರೂ. ಲಂಚ ಪಡೆಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಎಸಿಬಿ ಅಧಿಕಾರಿಗಳು ಆರೋಪಿಯನ್ನು ಅರೆಸ್ಟ್ ಮಾಡಿದರು.