ETV Bharat / state

ಮದ್ಯ ಮಾರಾಟ ಸಂಪೂರ್ಣ ನಿಷೇಧಕ್ಕಾಗಿ ಮಹಿಳೆಯರಿಂದ ಮುತ್ತಿಗೆಗೆ ಯತ್ನ..

ಮದ್ಯದಂಗಡಿ ಗ್ರಾಮದ ಮುಖ್ಯ ಪ್ರದೇಶದಲ್ಲಿದೆ.‌ ಇಲ್ಲಿಯೇ ಸ್ವಸಹಾಯ ಸಂಘದ ಕಚೇರಿ, ಸೊಸೈಟಿ, ಬ್ಯಾಂಕ್ ಇದೆ. ಇಲ್ಲಿ ಮದ್ಯದ ಅಂಗಡಿ ಇರುವುದರಿಂದ ಮಹಿಳೆಯರು ಓಡಾಡೋದು ಕಷ್ಟವಾಗುತ್ತಿದೆ.

Siege by women for complete ban on alcohol sales
ಮದ್ಯ ಮಾರಾಟ ಸಂಪೂರ್ಣ ನಿಷೇಧಕ್ಕಾಗಿ ಮಹಿಳೆಯರಿಂದ ಮುತ್ತಿಗೆ ಯತ್ನ
author img

By

Published : May 5, 2020, 6:19 PM IST

ಕೊಪ್ಪಳ : ಬಾರ್​​ಗಳನ್ನು ಶಾಶ್ವತವಾಗಿ ಬಂದ್ ಮಾಡಿಸುವಂತೆ ಆಗ್ರಹಿಸಿ ಮಹಿಳೆಯರು‌ ಮದ್ಯದಂಗಡಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ನಡೆದಿದೆ.

ಸುಮಾರು 40ಕ್ಕೂ ಹೆಚ್ಚು ಮಹಿಳೆಯರು ಕಿನ್ನಾಳ ಗ್ರಾಮದಲ್ಲಿನ ಬಾರ್ ಮುಚ್ಚಿಸಲು ಆಗ್ರಹಿಸಿದರು. ಮದ್ಯದಂಗಡಿ ಗ್ರಾಮದ ಮುಖ್ಯ ಪ್ರದೇಶದಲ್ಲಿದೆ.‌ ಇಲ್ಲಿಯೇ ಸ್ವಸಹಾಯ ಸಂಘದ ಕಚೇರಿ, ಸೊಸೈಟಿ, ಬ್ಯಾಂಕ್ ಇದೆ. ಇಲ್ಲಿ ಮದ್ಯದ ಅಂಗಡಿ ಇರುವುದರಿಂದ ಮಹಿಳೆಯರು ಓಡಾಡೋದು ಕಷ್ಟವಾಗುತ್ತದೆ.

ಕುಡುಕರು ಕುಡಿದು ಅಸಹ್ಯಕರ ರೀತಿಯಲ್ಲಿ ಬಿದ್ದಿರುತ್ತಾರೆ. ಅಲ್ಲದೆ ಕುಡಿತದಿಂದ ಅನೇಕ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಸಂಸಾರಗಳು ಹಾಳಾಗುತ್ತಿವೆ. ಆದ್ದರಿಂದ ನಮ್ಮೂರಿನಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು. ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ಜಾರಿ ಮಾಡಲಾಗಿದ್ದ ಮದ್ಯ ಮಾರಾಟ ಬಂದ್ ಮುಂದುವರೆಯಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.