ETV Bharat / state

ಶ್ರೀರಾಮುಲು ಬಂದ ಮೇಲೆ ಕಾಂಗ್ರೆಸ್ ಪಕ್ಷದವರಿಗೆ ಮರ್ಮಾಘಾತ: ಶಾಸಕ ಶಿವನಗೌಡ ನಾಯಕ್

ಎಸ್ಟಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಶಾಸಕ ಶಿವನಗೌಡ ನಾಯಕ್​, ಶ್ರೀರಾಮುಲು ಬಿಜೆಪಿಗೆ ಬಂದನಂತರ ಕಾಂಗ್ರೆಸ್ ಪಕ್ಷದ​​ ಪುರುಷತ್ವವನ್ನೆ ಕಟ್​ ಮಾಡಿದ್ದಾರೆ ಎಂದು ಹೇಳಿದ್ದಾರೆ.

KN_KPL_
ಶಿವನಗೌಡ ನಾಯಕ್
author img

By

Published : Nov 4, 2022, 5:14 PM IST

ಕೊಪ್ಪಳ: ಸಚಿವ ಬಿ.ಶ್ರೀರಾಮುಲು ಬಿಜೆಪಿಗೆ ಬಂದ ಮೇಲೆ ಕಾಂಗ್ರೆಸ್​​ನವರ ಪುರುಷತ್ವವನ್ಣೇ ಕಟ್ ಮಾಡಿದ್ದಾರೆ ಎಂದು ದೇವದುರ್ಗ ಶಾಸಕ ಶಿವನಗೌಡ ನಾಯಕ್ ಹೇಳಿದರು.

ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಎಸ್ಟಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಕೊಡಿಸುವ ಹೋರಾಟದಲ್ಲಿ ಶ್ರೀರಾಮಯಲು ಯಶಸ್ವಿಯಾಗಿದ್ದಾರೆ. ಬಿಜೆಪಿ ಆಡಳಿತ ವೈಖರಿಗೆ ಅದರಲ್ಲೂ ಸಚಿವ ಶ್ರೀರಾಮಲು ಅವರ ಕಾರ್ಯ ವೈಖರಿಗೆ ಕಾಂಗ್ರೆಸ್ ನವರಿಗೆ ಚಳಿ ಬಂದಿದೆ.

ಎಷ್ಟಿ ಸಮುದಾಯದ 45 ವರ್ಷಗಳ ಕಾಲ‌ ನಿರಂತರ ಹೋರಾಟಕ್ಕೆ ಬಿಜೆಪಿ ಸ್ಪಂದಿಸಿದೆ. ಆದರೇ ಕೆಲವರು ಇದರಲ್ಲಿ ರಾಜಕಾರಣ ಬೆರಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್​​ ವಿರುದ್ಧ ಶಿವನಗೌಡ ನಾಯಕ್ ಹೇಳಿಕೆ

ಕಾಂಗ್ರೆಸ್ ಮೀಸಲಾತಿ‌ ನೀಡಿದ್ದರೆ ನಾವು ಸ್ವಾಗತ ಮಾಡುತ್ತಿದ್ದೆವು. ಆದರೆ, ಅದು ಅವರಿಂದ ಆಗಲಿಲ್ಲ. ಆದರೆ, ಬಿಜೆಪಿ ಸರಕಾರ ನಮ್ಮ ಸಮುದಾಯದ ಬೆನ್ನಿಗೆ ನಿಂತಿದೆ. ನಮ್ಮ ಸಮುದಾಯದ 10 ಶಾಸಕರು, ಇಬ್ಬರು ಎಂಪಿಗಳನ್ನು ಪಕ್ಷಕ್ಕೆ ಕೊಟ್ಟಿದ್ದೇವೆ. ಬಳ್ಳಾರಿಯಲ್ಲಿ ದಾಖಲೆಯ ಸಮಾವೇಶ ಜರುಗಲಿದೆ. ಪ್ರತಿ ಜಿಲ್ಲೆಯಿಂದ 1 ಲಕ್ಷ ಜನರನ್ನು ಸೇರಿಸಲಾಗುತ್ತದೆ. ನಮ್ಮ ಸಮಾಜ ಪರೋಪಕಾರಿ ಸಮಾಜ, ನಮ್ಮ ಸಮಾಜವನ್ನು ಪ್ರೀತಿಯಿಂದ ಕಾಣಬೇಕು, ಬಿಜೆಪಿಯಲ್ಲಿ ಇರುವ ನಾವು ಧನ್ಯರು ಎಂದರು.

ಮೀಸಲಾತಿ ನೀಡುವ ಕೆಲಸವನ್ನು ಯಾವೊಬ್ಬ ಮುಖ್ಯಮಂತ್ರಿ ಮಾಡಲಿಲ್ಲ. ಆದರೆ, ಸಿಎಂ ಬಸವರಾಜ ಬೋಮ್ಮಾಯಿ ಅವರು ವೀರಶೈವ ಸಮಾಜಕ್ಕೆ ಸೇರಿದವರಾಗಿದ್ದು, ನಮ್ಮ ಸಣ್ಣ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದರು. ಅವರು ಈ ರಾಜ್ಯ ಕಂಡ ಆಧುನಿಕ ಅಂಬೇಡ್ಕರ್ ಎಂದರೆ ತಪ್ಪಾಗಲಾರದು ಎಂದರು.

ಇದನ್ನೂ ಓದಿ: ಮೂರು ದಿನಗಳ ಕಾಲ ಮುರುಘಾ ಶ್ರೀ ‌‌ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರ್ಟ್​ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.