ಕುಷ್ಟಗಿ (ಕೊಪ್ಪಳ): ಮಹಾಮಾರಿ ಕೊರೊನಾ ವೈರಸ್ ನಿರ್ಮೂಲನೆ ಹಾಗೂ ಲೋಕ ಕಲ್ಯಾಣ ಸಂಕಲ್ಪದ ಶಿವಶಕ್ತಿ ಯಜ್ಞ ತಾಲೂಕಿನ ವಜ್ರಬಂಡಿ ರಸ್ತೆಯ ನಾಗಾಸಾಧು ಆಶ್ರಮದಲ್ಲಿ ನಡೆಯುತ್ತಿದೆ.
ಶ್ರೀ ಅಮರನಾಥೇಶ್ವರ ಮಹಾದೇವ ಪ್ರತಿಷ್ಠಾನ ಚತುರ್ಥ ಮಹೋತ್ಸವ ಪ್ರಯುಕ್ತ ಈ ಶಿವಯಜ್ಞದಲ್ಲಿ ಶ್ರೀ ಪಂಚದಶನಾಮ ಜುನಾ ಅಖಾಡಾ ಮಹಾಮಂತ್ರಿ ಶ್ರೀ ಮಹಂತ ಹರಿ ಗಿರೀಜಿ ಮಹಾರಾಜ, ಹಿಮಾಚಲ ಪ್ರದೇಶದ ಮಾತೋಶ್ರೀ ಸೂರ್ಯವಂಶಿ ದೀದೀಜೀ, ತಾನಾಪತಿ ಜಯದೇವನಂದ ಗಿರೀಜಿ ಮಹಾರಾಜ್, ಹರಿದ್ವಾರದ ಮಹಂತ ದೀಪಕ್ ಗಿರೀಜಿ ಮಹಾರಾಜ್, ಹರಿಯಾಣದ ಮಹಂತ ಮೋಹೀತಾನಂದ ಗಿರೀಜಿ, ಹರಿಯಾಣದ ಪೂಜಾರಿ ರಾಕೀಬಾಬಾ ನೇತೃತ್ವವಹಿಸಿದ್ದಾರೆ.
ಶ್ರೀ ಪಂಚ ದಶನಾಮ ಜುನಾ ಅಖಡಾದ ರಾಷ್ಟ್ರೀಯ ಸಚಿವ ಶ್ರೀ ಅಮರನಾಥೇಶ್ವರ ಮಹಾದೇವ ಮಠ ಮುಖ್ಯಸ್ಥ ಶ್ರೀ ಮಹಂತ ಸಹದೇವಾನಂದ ಗಿರೀಜಿ ಮಾತನಾಡಿ, ಜಾಗತೀಕವಾಗಿ ಕಾಡುತ್ತಿದ್ದು, ಈ ಮಹಾಮಾರಿಯಿಂದ ಜನರು ದುಃಖದಲ್ಲಿದ್ದಾರೆ. ಜನರು ಆತಂಕದಲ್ಲಿದ್ದಾರೆ. ಮಹಾಮಾರಿಯಿಂದ ಲೋಕವನ್ನು ರಕ್ಷಿಸಿಸುವ ಸಂಕಲ್ಪದೊಂದಿಗೆ ದೇಶವನ್ನು ಕೊರೊನಾ ಮುಕ್ತಗೊಳಿಸಲು ಈ ಶಿವಯಜ್ಞ ಹಮ್ಮಿಕೊಳ್ಳಲಾಗಿದೆ.
ಇನ್ನು ಶಿವಸ್ತುತಿಯಿಂದ ಈ ಯಜ್ಞದಿಂದ ಸಕಲ ಜೀವ ಸಂಕುಲಕ್ಕೆ ಒಳಿತಾಗಲಿದೆ. ನ.23 ರಂದು ಈ ಯಜ್ಞ ಪೂರ್ಣಾಹುತಿಯೊಂದಿಗೆ ಮಹಾ ಸಂಪನ್ನಗೊಳ್ಳಲಿದೆ ಎಂದರು.