ETV Bharat / state

ಬಸವಣ್ಣನ ಜತೆ ಅಂಬಿಗರ ಚೌಡಯ್ಯ ಜಾತಿ, ಮೌಢ್ಯ ತೊಲಗಿಸಲು ಶ್ರಮಿಸಿದ ನಿಜ ಶರಣ.. - koppala latest news

ನಗರದ ಸಾಹಿತ್ಯ ಭವನದಲ್ಲಿಂದು ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು.

Sharana Ambigara Chowdhaya Jayanti Program at Koppala
ಶಿಕ್ಷಣ, ಸಂಘಟನೆ ಬಹುಮುಖ್ಯ: ಸಂಗಣ್ಣ ಕರಡಿ
author img

By

Published : Jan 21, 2020, 4:43 PM IST

ಕೊಪ್ಪಳ: ಇಂದಿನ ಪಾರ್ಲಿಮೆಂಟ್‌ 12ನೇ ಶತಮಾನದ ಅನುಭವ ಮಂಟಪದಿಂದ ಪಡೆದ ವ್ಯವಸ್ಥೆ ಅಂತಾ ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿಂದು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ಬಸವಣ್ಣನ ಜತೆಗೂಡಿ ಜಾತಿವ್ಯವಸ್ಥೆಯ ಬಗ್ಗೆ, ಮೌಢ್ಯತೆಯ ಬಗ್ಗೆ ಅರಿವು ಮೂಡಿಸಿದ್ದಾರೆಂದರು.

ಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ..

ಅನುಭವ ಮಂಟಪದ ಮೂಲಕ ಅಂಬಿಗರ ಚೌಡಯ್ಯರಾದಿಯಾಗಿ ಶರಣರು ಚಿಂತನ-ಮಂಥನ ನಡೆಸುತ್ತಿದ್ದರು. ಇಂದಿನ ಪಾರ್ಲಿಮೆಂಟ್ ಅಂದಿನ ಅನುಭವ ಮಂಟಪದಿಂದ ಪಡೆದ ವ್ಯವಸ್ಥೆಯಾಗಿದೆ‌. ಶರಣರ, ಮಹಾತ್ಮರ ಜಯಂತಿಯನ್ನು ಮಾಡಿದರಷ್ಟೇ ಸಾಲದು, ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು. ಶಿಕ್ಷಣ ಮತ್ತು ಸಂಘಟನೆ ಬಹುಮುಖ್ಯ. ಇದನ್ನೇ ಡಾ. ಅಂಬೇಡ್ಕರ್ ಅವರೂ ಸಹ ಹೇಳಿದ್ದಾರೆ. ಶಿಕ್ಷಣ ಮತ್ತು ಸಂಘಟನೆಯಿಂದ ಸರ್ಕಾರದ ಸೌಲಭ್ಯ ಪಡೆಯಬಹುದು ಎಂದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್, ಭಾಗ್ಯನಗರ ಪಟ್ಟಣ ಪಂಚಾಯತ್ ಸದಸ್ಯ ಗಂಗಾಧರ ಕಬ್ಬೇರ್, ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಬಾಳಪ್ಪ ಬಾರಕೇರ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ ಸೇರಿ ಮೊದಲಾದವರು ಕಾರ್ಯಕ್ರಮದಲ್ಲಿದ್ದರು.

Intro:

Body:ಕೊಪ್ಪಳ:- ನಾವೀಗ ಅಧುನಿಕ ಜಗತ್ತಿನಲ್ಲಿದ್ದೇವೆ. ಪ್ರತಿಯೊಬ್ಬರು ಶಿಕ್ಷಣವಂತರಾಗಿ ಸಂಘಟನೆಗೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ಕರೆ ನೀಡಿದರು. ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಬಿಗರ ಚೌಡಯ್ಯ ಅವರು 12 ನೇ ಶತಮಾನದಲ್ಲಿ ಬಸವಣ್ಣನವರೊಡಗೂಡಿ ಜಾತಿವ್ಯವಸ್ಥೆಯ ಬಗ್ಗೆ, ಮೌಢ್ಯತೆ ಬಗ್ಗೆ ಅರಿವು ಮೂಡಿಸಿದರು. ಶರಣರ ವಚನ ಸಾಹಿತ್ಯ ಅಧ್ಯಯನ ಮಾಡಿದಾಗ ಇದು ಗೊತ್ತಾಗಿದೆ. 12 ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಅಂಬಿಗರ ಚೌಡಯ್ಯರಾದಿಯಾಗಿ ಶರಣರು ಚಿಂತನ ಮಂಥನ ನಡೆಸುತ್ತಿದ್ದರು. ಇಂದಿನ ಪಾರ್ಲಿಮೆಂಟ್ ಅಂದಿನ ಅನುಭವ ಮಂಟಪದಿಂದ ಪಡೆದ ವ್ಯವಸ್ಥೆಯಾಗಿದೆ‌. ಶರಣರ, ಮಹಾತ್ಮರ ಜಯಂತಿಯನ್ನು ಮಾಡಿದರಷ್ಟೆ ಸಾಲದು. ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಇನ್ನು ಶಿಕ್ಷಣ, ಸಂಘಟನೆ ಬಹುಮುಖ್ಯ. ಇದನ್ನೇ ಡಾ. ಅಂಬೇಡ್ಕರ್ ಅವರೂ ಹೇಳಿರೋದು. ಶಿಕ್ಷಣ ಮತ್ತು ಸಂಘಟನೆಯಿಂದ ಸರ್ಕಾರದ ಸೌಲಭ್ಯ ಪಡೆಯಬಹುದು ಎಂದು ಹೇಳಿದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್, ಭಾಗ್ಯನಗರ ಪಟ್ಟಣ ಪಂಚಾಯತ್ ಸದಸ್ಯ ಗಂಗಾಧರ ಕಬ್ಬೇರ್, ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಬಾಳಪ್ಪ ಬಾರಕೇರ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ‌ ಮಹಾಂತೇಶ ಪಾಟೀಲ್ ಮೈನಳ್ಳಿ ಸೇರಿದಂತೆ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೈಟ್1:- ಸಂಗಣ್ಣ ಕರಡಿ, ಕೊಪ್ಪಳ ಸಂಸದ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.