ಕೊಪ್ಪಳ: ಸಾರಿಗೆ ಮುಷ್ಕರದ ನಡುವೆಯೂ ಕೆಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು, ಕೆಲಸಕ್ಕೆ ಹಾಜರಾದ ಸಿಬ್ಬಂದಿಗೆ ಮುಷ್ಕರ ನಿರತ ಸಿಬ್ಬಂದಿಗಳ ಕುಟುಂಬದ ಸದಸ್ಯರು ಹೂವಿನ ಹಾರ ಹಾಕಲು ಯತ್ನಿಸಿದರು.
ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಕುಟುಂಬದವರು ಇಂದು ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಆಗಮಿಸಿ ಅಂಬೇಡ್ಕರ್ ಭಾವ ಚಿತ್ರ ಇರಿಸಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಕರ್ತವ್ಯನಿರತ ಸಿಬ್ಬಂದಿಗೆ ಹೂವಿನ ಹಾರ ಹಾಕಲು ಮುಷ್ಕರ ನಿರತ ಸಿಬ್ಬಂದಿ ಕುಟುಂಬಸ್ಥರು ಪ್ರಯತ್ನಿಸಿದರು. ನ್ಯಾಯಯುತ ಬೇಡಿಕೆಗೆ ಆಗ್ರಹಿಸಿ ಮುಷ್ಕರ ನಡೆಯುತ್ತಿದ್ದು, ನೀವು ಕರ್ತವ್ಯಕ್ಕೆ ಹಾಜರಾಗಿದ್ದೀರಿ. ಇದು ಯಾವ ನ್ಯಾಯ. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಚಾಲಕರಿಗೆ ಹೂವಿನ ಹಾರ ಹಾಕಲು ಪ್ರಯತ್ನಿಸಿದರು.
ಇದನ್ನೂ ಓದಿ: ನರೇಂದ್ರ ಮೋದಿಯವರೇ ತೀರ್ಮಾನಿಸಿ ಮಂಗಳಾ ಅವರಿಗೆ ಟಿಕೆಟ್ ನೀಡಿದ್ದಾರೆ: ಸಿಎಂ ಯಡಿಯೂರಪ್ಪ
ಸಿಆರ್ಪಿಸಿ 144 ರ ಅನ್ವಯ ನಿಷೇಧಾಜ್ಞೆ ಇರುವುದರಿಂದ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಕುಟುಂಬಸ್ಥರಿಗೆ ಮನವರಿಕೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗೀಯ ನಿಯಂತ್ರಕ ಎಂ.ಎ.ಮುಲ್ಲಾ ಅವರ ಕುಟುಂಬಸ್ಥರನ್ನು ಸಮಾಧಾನಪಡಿಸಿದರು.