ಕುಷ್ಟಗಿ(ಕೊಪ್ಪಳ): ತಾಲೂಕಿನ ನೆರೆಬೆಂಚಿ ಗ್ರಾಮದ ರಸ್ತೆ ಅಕ್ಷರಶಃ ಕೆಸರು ಗದ್ದೆಯಾಗಿ ಪರಿವರ್ತನೆಯಾಗಿದೆ. ರಸ್ತೆಯ ಅವ್ಯವಸ್ಥೆಗೆ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.
ತಾಲೂಕಿನ ಕಂದಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆರೆಬೆಂಚಿ ಗ್ರಾಮದ ಈ ಮುಖ್ಯ ರಸ್ತೆಯನ್ನು ನಾಲ್ಕೈದು ವರ್ಷಗಳ ಹಿಂದೆ ಸಿಸಿ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿತ್ತು. ಸದ್ಯ ರಸ್ತೆ ಹದಗೆಟ್ಟಿದೆ. ಮೊದಲೇ ಹದಗೆಟ್ಟಿದ್ದ ಈ ರಸ್ತೆ ಕೆಲ ದಿನಗಳಿಂದ ತುಂತುರು ಮಳೆಯಿಂದಾಗಿ ಅಕ್ಷರಶಃ ಕೆಸರು ಗದ್ದೆಯಾಗಿದೆ.
ಸಾರ್ವಜನಿಕರು ಇದೇ ರಸ್ತೆಯಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ. ಸಿಸಿ ರಸ್ತೆ ಬೇಡಿಕೆಯಿದೆ. ಹಾಗಾಗಿ ಪಿಡಿಒ ಅವರಿಗೆ ಸ್ಥಳ ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಎಂಸಿ ಅಧ್ಯಕ್ಷ ಭರಮಣ್ಣ ಕಲ್ಲಗುಡಿ ಒತ್ತಾಯಿಸಿದ್ದಾರೆ.