ಗಂಗಾವತಿ(ಕೊಪ್ಪಳ): ಇತ್ತೀಚೆಗೆ ನಿಧನರಾದ ಸ್ಯಾಂಡಲ್ವುಡ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ತಾಲೂಕಿನ ಪ್ರಮುಖ ಧಾರ್ಮಿಕ ತಾಣ ಅಂಜನಾದ್ರಿಯಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷ ನಮನ ಸಲ್ಲಿಸಲಾಯಿತು.
ಹನುಮ ಜಯಂತಿ ಅಂಗವಾಗಿ ಬೆಟ್ಟದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿ ಭಕ್ತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಪ್ಪು ಅವರ ಕೆಲ ಅಭಿಮಾನಿಗಳು ಪುನೀತ್ ಭಾವಚಿತ್ರ ಇಟ್ಟು ನಮನ ಸಲ್ಲಿಸಿದರು.
ತಾಲೂಕಿನ ಚಿಕ್ಕ ರಾಂಪೂರದಲ್ಲಿರುವ ಅಂಜನಾದ್ರಿ ಬೆಟ್ಟ ವಿಶ್ವ ವಿಖ್ಯಾತವಾಗಿದ್ದು, ಪುನೀತ್ ಇಲ್ಲಿಗೆ ಎರಡು ಮೂರು ಬಾರಿ ಭೇಟಿ ನೀಡಿದ್ದರು. ಇದೊಂದು ವಿಶೇಷ ಧಾರ್ಮಿಕ ಸ್ಥಳವಾಗಿದ್ದರಿಂದ ಅಪ್ಪು ಅವರಿಗೆ ನೆಚ್ಚಿನ ತಾಣವಾಗಿತ್ತು. ಈ ಹಿನ್ನೆಲೆ ಹೊಸಪೇಟೆ, ಗಂಗಾವತಿಗೆ ಬಂದಾಗ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರಂತೆ.
ಇದನ್ನೂ ಓದಿ: ಹನುಮ ಮಾಲಾಧಾರಿಗಳ ಬಸ್ ತಡೆದ ಪೊಲೀಸರು: ನಿಷೇಧದ ನಡುವೆಯೂ ಅಂಜನಾದ್ರಿಯಲ್ಲಿ ಮಾಲಾ ವಿಸರ್ಜನೆ