ಕೊಪ್ಪಳ: ಡಾ ಪುನೀತ್ ರಾಜ್ಕುಮಾರರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಲ್ಲಿ ರಾಜಕೀಯ ಮಾಡಬಾರದು. ಪುನೀತ್ ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರ ಸಾಧನೆಯನ್ನು ನೋಡಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ. ಅವರು ನಟನೆ ಜೊತೆಗೆ ಕೈಗೊಂಡ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಯಾರೋ ಹಾದಿಯಲ್ಲಿ ಹೋಗುವವರನ್ನು ಹಿಡಿದು ಪ್ರಶಸ್ತಿ ಕೊಟ್ಟಿಲ್ಲ. ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ನಿನ್ನೆ ಪ್ರಶಸ್ತಿ ನೀಡುವಾಗ ಮಳೆ ಬಂದು ಕಾರ್ಯಕ್ರಮ ಅಸ್ತವ್ಯಸ್ತವಾಗಿದೆ ಎಂದರು.
ಧಾರವಾಡದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಮಾತನಾಡಿ, ನಾನು ನಿನ್ನೆಯೇ ಅವರೊಂದಿಗೆ ಮಾತನಾಡಿದ್ದೇನೆ. ದರ ನಿಗದಿಯ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ಈ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ. ನಮ್ಮ ಸರ್ಕಾರ ರೈತರ ಪರವಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯವನ್ನು ಕೊಪ್ಪಳದಲ್ಲಿ ಆರಂಭಿಸಲಾಗುವುದು. ಸಚಿವ ಆನಂದಸಿಂಗ್ ನಮ್ಮ ಸಂಪರ್ಕದಲ್ಲಿದ್ದಾರೆ. ಮಳೆಯಿಂದ ಜೀವ ಹಾನಿಯಾಗಿದೆ. ಈ ಸಂದರ್ಭದಲ್ಲಿ ನಾನು ಭೇಟಿ ನೀಡಿದ್ದೇನೆ. ಎಲ್ಲರೂ ಒಟ್ಟಾಗಿಯೇ ಇದ್ದೇವೆ. ಇಲ್ಲಿಯ ಸಮಸ್ಯೆಯನ್ನು ಅವರಿಗೆ ತಿಳಿಸಿದ್ದೇವೆ. ಅವರು ಸ್ಪಂದಿಸುತ್ತಾರೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಓದಿ: 67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.. ಇದೇ ಮೊದಲ ಬಾರಿಗೆ 5 ಲಕ್ಷ ನಗದು, 25 ಗ್ರಾಂ ಬಂಗಾರ, ಪ್ರಶಸ್ತಿ ಫಲಕ