ETV Bharat / state

ಎರಡು ವರ್ಷದ ಮಹಿಳೆಯ ಅಲೆದಾಟಕ್ಕೆ ಮುಕ್ತಿ.. ಹಳೆಯ ಕಡತ ಹುಡುಕಲು ತಹಶೀಲ್ದಾರ್‌ ಸೂಚನೆ

author img

By

Published : Sep 15, 2020, 7:22 PM IST

ಕೃಷಿ ಜಮೀನು ಮಾರಾಟಕ್ಕೆ ಅವಕಾಶ ನೀಡುವಂತೆ ಸೂಕ್ತ ದಾಖಲೆಗಳೊಂದಿಗೆ 16 ಜನವರಿ 2019ರಂದು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಕಡತ ವಿಲೇವಾರಿಯಾಗದೆ ಕಚೇರಿಗೆ ಅಲೆಯುತ್ತಿದ್ದರು..

problems of women finally solved  who facing assets-selling-issue
ಎರಡು ವರ್ಷದ ಮಹಿಳೆಯ ಅಲೆದಾಟಕ್ಕೆ ಮುಕ್ತಿ: ಹಳೆಯ ಕಡತ ಹುಡುಕಲು ಸೂಚನೆ

ಗಂಗಾವತಿ (ಕೊಪ್ಪಳ): ಗಂಡನ ಚಿಕಿತ್ಸೆಗೆ ಮಾಡಿದ ಸಾಲ ತೀರಿಸಲು ತುರ್ತು ಹಣದ ಅಗತ್ಯವಿದ್ದು, ಕುಟುಂಬಕ್ಕೆ ಆಧಾರವಾಗಿರುವ ಜಮೀನು ಮಾರಾಟ ಮಾಡಲು ಅವಕಾಶ ನೀಡುವಂತೆ ಮಹಿಳೆಯೊಬ್ಬರು ಕಳೆದ ಎರಡು ವರ್ಷದಿಂದ ಕಂದಾಯ ಇಲಾಖೆಗೆ ಅಲೆಯುತ್ತಿದ್ದರು.

ಇದೀಗ ಇಲ್ಲಿನ ತಹಶೀಲ್ದಾರ್​ ಇವರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಮಂಜುಳ ಎಂಬುವರ ಒಂದು ವರ್ಷ ಹಳೆಯ ಅರ್ಜಿ ವಿಚಾರ ನನ್ನ ಗಮನಕ್ಕೆ ಬಂದಿದೆ. ಅವರ ಕಡತಗಳನ್ನು ಹುಡುಕಲು ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಕವಿತಾ ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ಅರ್ಜಿ ನೀಡಿದ್ದು, ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂಬುದು ಕಡತ ನೋಡಿದ ಮೇಲೆ ತಿಳಿಯಲಿದೆ ಎಂದಿದ್ದಾರೆ. ಒಂದೊಮ್ಮೆ ಅರ್ಜಿಗೆ ಪೂರಕ ದಾಖಲೆಗಳು ಬೇಕಾಗಿದ್ರೆ ತರಿಸಿಕೊಂಡು ಕಡತ ವಿಲೇವಾರಿ ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಸಾಲ ತೀರಿಸಲು ಆಸ್ತಿ ಮಾರಾಟಕ್ಕೆ ಸಿಗದ ಅನುಮತಿ : ಮಹಿಳೆಯ ಪರದಾಟ

ಇದಲ್ಲದೆ ಈ ಘಟನೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯವಿದ್ದರೂ ಸೂಕ್ತ ಶಿಸ್ತುಕ್ರಮಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದಿದ್ದಾರೆ. ಈ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ಇದು ಅಧಿಕಾರಿಗಳ ಕಣ್ಣು ತೆರೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.