ETV Bharat / state

ಉಳುಮೆಗೂ ಜೈ, ಭಾರ ಎಳೆಯಲೂ ಸೈ: ಈ ಬಲಾಢ್ಯ ಜೋಡೆತ್ತುಗಳ ನೋಡೋದೇ ಚೆಂದ!

ರೈತರು ಹಾಗೂ ಎತ್ತುಗಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳನ್ನು ರೈತರು ಅಕ್ಕರೆಯಿಂದ ಸಾಕುತ್ತಾರೆ. ಇಲ್ಲೊಬ್ಬ ರೈತ ತನ್ನ ಎತ್ತುಗಳನ್ನು ಆನೆಯಂತೆ ಬೆಳೆಸಿದ್ದಾನೆ. ಈ ಕುರಿತ ವರದಿ ಇಲ್ಲಿದೆ.

oxen
ಜೋಡೆತ್ತುಗಳು
author img

By

Published : Jul 9, 2020, 5:31 PM IST

ಕೊಪ್ಪಳ: ಕುಷ್ಟಗಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿರುವ ಬಲಾಢ್ಯವಾದ ಜೋಡಿ ಎತ್ತುಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿವೆ. ಈ ಎತ್ತುಗಳನ್ನು ನೋಡಿದವರು ಅವುಗಳ ದೇಹದಾರ್ಢ್ಯತೆಗೆ ಒಂದೊಮ್ಮೆ ಉದ್ಘರಿಸದೇ ಇರುವುದಿಲ್ಲ.

ಜೋಡೆತ್ತುಗಳು

ಈ ಗ್ರಾಮದಲ್ಲಿ ವಾಸಿಸುವ ಶರಣಪ್ಪ ಗುಡಿಹಿಂದಿನ ಎಂಬುವವರು ಎತ್ತುಗಳನ್ನು ಈ ರೀತಿ ಬೆಳೆಸಿದ್ದಾರೆ. ಇವರ ಬಳಿ ಕಿಲಾರಿ ಹಾಗೂ ಸ್ಥಳೀಯ ಎತ್ತುಗಳಿದ್ದು, ಸುತ್ತಲಿನ ಗ್ರಾಮಗಳಲ್ಲಿ ಜಾತ್ರೆ ನಡೆದಾಗ ಈ ಎತ್ತುಗಳ ಶಕ್ತಿ ಸಾಮರ್ಥ್ಯಕ್ಕೆ ಎಲ್ರೂ ಬೆರಗಾಗೋದುಂಟು. ಈ ರೀತಿಯಾಗಿ ಎತ್ತುಗಳನ್ನು ಬೆಳೆಸೋದು ಸಾಮಾನ್ಯದ ಕೆಲಸವಲ್ಲ. ಅವುಗಳಿಗೆ ಮೇವಿನ ಜೊತೆಗೆ ನಿತ್ಯವೂ ಹತ್ತಿ ಕಾಳು, ಹುರುಳಿ ನುಚ್ಚು ಸೇರಿದಂತೆ ಪೌಷ್ಠಿಕ ಆಹಾರವನ್ನು ತಿನ್ನಿಸ್ತಾರೆ. ಈ ಭೀಮಬಲದ ಎತ್ತುಗಳನ್ನು ನೋಡೋಕೆ ಅಂತಾನೇ ಸುತ್ತಮುತ್ತಲ ಗ್ರಾಮಗಳಿಂದ ಜನರು ಬರ್ತಾರೆ.

ಈ ಎತ್ತುಗಳನ್ನು ಈಗಾಗಲೇ ಬೇರೆಯವರು ಎಡರೂವರೆ ಲಕ್ಷ ರೂಪಾಯಿಗೂ ಅಧಿಕ ಬೆಲೆಯಲ್ಲಿ ಕೇಳಿದ್ರೂ ರೈತ ಶರಣಪ್ಪ ಮಾರಾಟ ಮಾಡಿಲ್ಲ. ಈ ಹಿಂದೆ ಸಾಕಿದ್ದ ಜೋಡೆತ್ತನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಎತ್ತುಗಳನ್ನು ಆನೆಯಂತೆ ಸಾಕುವುದು ಇವರ ಹವ್ಯಾಸ. ಒಟ್ನಲ್ಲಿ ಈ ಜೋಡೆತ್ತು ನೋಡೋದೆ ಒಂದು ಆನಂದ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.