ಕೊಪ್ಪಳ : ಕೊರೊನಾ ಟೆಸ್ಟ್ಗಾಗಿ ಪಡೆದ ಗಂಟಲು ದ್ರವದ ಸ್ಯಾಂಪಲ್ಗಳ ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗ ಪೂಲ್ಡ್ ಸ್ಯಾಂಪಲ್ ಟೆಸ್ಟ್ಗೆ ಮುಂದಾಗಿದೆ.
ಪೂಲ್ಡ್ ಟೆಸ್ಟ್ನಿಂದ ಸ್ಯಾಂಪಲ್ಸ್ ಟೆಸ್ಟ್ ಸಂಖ್ಯೆ ಹೆಚ್ಚಳವಾಗಲಿದೆ. ಪೂಲ್ಡ್ ಸ್ಯಾಂಪಲ್ ಟೆಸ್ಟ್ ಅಂದರೆ ಐದು ಜನರ ಮಾದರಿಯನ್ನು ಒಂದೇ ಟ್ಯೂಬ್ನಲ್ಲಿ ಸಂಗ್ರಹಿಸಿ ಅದನ್ನು ಕೊರೊನಾ ಟೆಸ್ಟ್ಗೆ ಒಳಪಡಿಸುವುದು. ಇಲ್ಲಿ ಪೂಲ್ಡ್ ಸ್ಯಾಂಪಲ್ನಲ್ಲಿ ವರದಿ ನೆಗಟಿವ್ ಬಂದರೆ ಆ ಐದೂ ಜನರ ವರದಿ ನೆಗಟಿವ್ ಆಗಿರುತ್ತದೆ.
ಪಾಸಿಟಿವ್ ಬಂದರೆ ಮತ್ತೆ ಆ ಐದೂ ಜನರ ಮಾದರಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗುತ್ತದೆ. ಆಗ ಐವರಲ್ಲಿ ಯಾರಿಗೆ ಪಾಸಿಟಿವ್ ಇದೆ ಎಂದು ತಿಳಿಯುತ್ತದೆ ಎಂದು ಜಿಲ್ಲಾಧಿಕಾರಿ ಸುನೀಲ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಈವರೆಗೆ ಒಟ್ಟು 84 ಪಾಸಿಟಿವ್ ಪ್ರಕರಣ ಕಂಡು ಬಂದಿವೆ. ನಿನ್ನೆ ಪಡೆದಿರುವ 340 ಸ್ಯಾಂಪಲ್ಗಳಲ್ಲಿ ಯಾವುದೇ ಪಾಸಿಟಿವ್ ಕೇಸ್ ಬಂದಿಲ್ಲ. ಹೀಗಾಗಿ ಇಂದು ಕೊಪ್ಪಳದಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಈವರೆಗೂ ಜಿಲ್ಲೆಯಲ್ಲಿ 9,359 ಸ್ಯಾಂಪಲ್ಗಳನ್ನು ಸಂಗ್ರಹ ಮಾಡಲಾಗಿದೆ. ಈ ಪೈಕಿ 8,557 ರಿಸಲ್ಟ್ ಬಂದಿವೆ ಎಂದು ಮಾಹಿತಿ ನೀಡಿದ್ದಾರೆ.