ETV Bharat / state

ರಸ್ತೆ ಸರಿಪಡಿಸಿ ಎಂದಿದ್ದೇ ತಪ್ಪಾಯ್ತಾ.. ಯುವಕನಿಗೆ ಅವಾಜ್ ಹಾಕಿದ್ರಾ ಪೊಲೀಸ್​? - police scolded young man at koppala

ಉಳೇನೂರು ಗ್ರಾಮದ ರಸ್ತೆ ಅಭಿವೃದ್ಧಿ ವಿಚಾರವಾಗಿ ಧ್ವನಿ ಎತ್ತಿದ ಯುವಕನಿಗೆ ಕಾರಟಗಿ ಪೊಲೀಸರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿವೆ.

police scolded young man who ask about road repair work at koppala
ಯುವಕನಿಗೆ ಪೊಲೀಸರು ಅವಾಜ್​ ಹಾಕಿದ ಆರೋಪ
author img

By

Published : Jan 19, 2022, 4:34 PM IST

Updated : Jan 19, 2022, 4:54 PM IST

ಗಂಗಾವತಿ(ಕೊಪ್ಪಳ): ಕಾರಟಗಿ ತಾಲೂಕಿನ ಉಳೇನೂರು ಗ್ರಾಮದ ರಸ್ತೆ ಅಭಿವೃದ್ಧಿ ವಿಚಾರವಾಗಿ ಯುವಕನೊಬ್ಬ ಮಾತನಾಡಿದ ದೃಶ್ಯಗಳನ್ನು ಸಮಾಜಿಕ ಜಾಲತಾಣದಲ್ಲಿ ಹಾಕಿದ್ದಕ್ಕೆ, ಪೊಲೀಸರು ಆ ಯುವಕನಿಗೆ ಅವಾಜ್ ಹಾಕಿ ಹೆದರಿಸಿದ್ದಾರೆನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಉಳೇನೂರು ಗ್ರಾಮದ ಸುರೇಶ ಮಡಿವಾಳರ್ ಎಂಬ ಯುವಕ ತನ್ನ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ಗ್ರಾಮಸ್ಥರು, ಮುಖ್ಯವಾಗಿ ಶಾಲಾ-ಕಾಲೇಜಿನ ಮಕ್ಕಳು ತೀವ್ರ ಪರದಾಡುವಂತಾಗಿದೆ ಎಂದು ಕಳೆದ ನಾಲ್ಕು ತಿಂಗಳ ಹಿಂದೆ ವಿಡಿಯೋ ಮಾಡಿ ಫೇಸ್​ಬುಕ್​ಗೆ ಅಪಲೋಡ್ ಮಾಡಿದ್ದ.

ಉಳೇನೂರು ಗ್ರಾಮದ ಸುರೇಶ ಮಡಿವಾಳರ್ ಆರೋಪವಿದು..

ಇದು ಸಾಕಷ್ಟು ವೈರಲ್ ಆಗುತ್ತಿದ್ದಂತೆ 2021ರ ಸೆ. 5ರಂದು 'ಈಟಿವಿ ಭಾರತ'ದಲ್ಲಿ ಸುದ್ದಿ ಪ್ರಸಾರವಾಗಿತ್ತು. ಬಳಿಕ ಎಚ್ಚೆತ್ತ ಶಾಸಕ ಬಸವರಾಜ ದಢೇಸ್ಗೂರು ಕಾಮಗಾರಿಗೆ ಚಾಲನೆ ಕೊಡಿಸಿದ್ದರು. ಆದರೆ ಅಂದು ಆರಂಭವಾದ ಕಾಮಗಾರಿ ಅರೆಬರೆಯಾಗಿದ್ದು, ಈ ಮೊದಲಿಗಿಂತಲೂ ರಸ್ತೆ ಹೆಚ್ಚು ಹಾಳಾಗಲು ಕಾಮಗಾರಿ ಕಾರಣ ಎಂದು ಯುವಕರು ಆರೋಪಿಸಿದ್ದಾರೆ.

ರಸ್ತೆ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ್ದ ವಿಡಿಯೋ

ಇದನ್ನೂ ಓದಿ: ಬೆಳಗಾವಿ : ರಮೇಶ್ ಜಾರಕಿಹೊಳಿ‌ ಪುತ್ರನ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ ಆರೋಪ

ಹೀಗಾಗಿ ಮತ್ತೊಮ್ಮೆ ವಿಡಿಯೋ ಮಾಡಿದ ಯುವಕ ಸುರೇಶ, ರಸ್ತೆ ಕಾಮಗಾರಿ ಬಗ್ಗೆ ಕೇಳಿದ್ದಕ್ಕೆ ಕಾರಟಗಿ ಪೊಲೀಸರು ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿದ್ದಾನೆ.

Last Updated : Jan 19, 2022, 4:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.